ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋ ದರವನ್ನು ಹೆಚ್ಚಿಸಿದೆ. 25 ಬೇಸ್ ಪಾಯಿಂಟ್’ಗಳೊಂದಿಗೆ ಶೇ.6.5 ರಷ್ಟು ಹೆಚ್ಚಳ ಮಾಡಲಾಗಿದೆ
ಕೇಂದ್ರ ಬಜೆಟ್’ನ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ (ಎಂಪಿಸಿ) ಆರ್’ಬಿಐ ಗವರ್ನರ್ ಶಕ್ತಿತಾಂತ ದಾಸ್ ರೆಪೊ ದರ ಹೆಚ್ಚಳವನ್ನು ಪ್ರಕಟಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಿಂದ ಆರ್’ಬಿಐ ಆರನೇ ಸಲ ಬಡ್ಡಿದರವನ್ನು ಹೆಚ್ಚಿಸಿದೆ. ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಬಹುತೇಕ ಸದಸ್ಯರು ಹಣದುಬ್ಬರ ನಿಯಂತ್ರಣ ಮಾಡಲು ಬಡ್ಡಿದರ ಹೆಚ್ಚಳದ ಪರವಾಗಿಯೇ ಮತ ನೀಡಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ 6.4 ಬೆಳವಣಿಗೆ ದರ ಇರಲಿದೆ ಎಂದು ಆರ್’ಬಿಐ ಅಂದಾಜಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಪ್ರಸಕ್ತ ಹಣಕಾಸು ವರ್ಷದ 7 ರಷ್ಟಿರುವ ಜಿಡಿಪಿಯು 2024 ರ ಭಾರತದ ಆರ್ಥಿಕ ಬೆಳವಣಿಗೆಯು ಶೇ 6.4 ರಷ್ಟು ಅಂದಾಜಿಸಲಾಗಿದೆ. ಆರ್’ಬಿಐನ ಆಂತರಿಕ ಸಮೀಕ್ಷೆಯು ಉತ್ಪಾದನೆ, ಸೇವೆಗಳು ಮತ್ತು ಮೂಲಸೌಕರ್ಯ ವಲಯದ ಸಂಸ್ಥೆಗಳು ವ್ಯವಹಾರದ ದೃಷ್ಟಿಕೋನದ ಬಗ್ಗೆ ಆಶಾವಾದಿಯಾಗಿವೆ ಎಂದು ಹೇಳಿದರು.
2023-24 ರಲ್ಲಿ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದರ ಬೆಳವಣಿಗೆಯು ಕ್ರಮವಾಗಿ 7.8 ಮತ್ತು 6.2 ಶೇಕಡಾ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ಮತ್ತು ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಕ್ರಮವಾಗಿ ಶೇ.6 ಮತ್ತು ಶೇ.5.8 ಎಂದು ಅಂದಾಜಿಸಲಾಗಿದೆ. ಆರ್ಥಿಕತೆಗೆ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿತ್ತೀಯ ನೀತಿಯಲ್ಲಿ ಚುರುಕು ಮತ್ತು ಎಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.