ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮುದ್ದಿನ ನಾಯಿ ಔರಾಗೆ ವಿಮಾನ ಟಿಕೆಟ್ ಬೇಕು ಎಂಬ ಮಾಧ್ಯಮಗಳ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
ಹೌದು, ಈಮ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಅವರು, ಇದು ನಾನು ಹೇಳಿದಲ್ಲ, ನ್ಯೂಸ್ ಪೋರ್ಟಲ್ಗಳು ಕಲ್ಪಿಸಿರುವ ‘ಅರ್ಥ’ ಆದರೆ ಈ ಸುದ್ದಿ ಈ ದಿನದ ಸಂತೋಷಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಔರಾ ಹೈದರಾಬಾದ್ನಲ್ಲಿ ‘ತುಂಬಾ ಸಂತೋಷವಾಗಿದ್ದಾಳೆ’ ಮತ್ತು ನನ್ನೊಂದಿಗೆ ಪ್ರಯಾಣಿಸಲು ಬಯಸಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
ಮಾಧ್ಯಮಗಳು ರಶ್ಮಿಕಾ ‘ತನ್ನ ಸಾಕು ನಾಯಿಗೆ ವಿಮಾನ ಟಿಕೆಟ್ಗೆ ಬೇಡಿಕೆ ಇಡುತ್ತಿದ್ದಾರೆ. ‘ ನಾಯಿ ಇಲ್ಲದೇ ನಾನು ಹೊರಡುವುದಿಲ್ಲ’ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದ್ದವು ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.