ಟಾಲಿವುಡ್ ನಟ ರಾಮ್ಚರಣ್ ಇಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ರಾಮ್ಚರಣ್ಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಬರ್ತ್ಡೇ ವಿಶ್ ಮಾಡ್ತಿದ್ದಾರೆ. ಇನ್ನು ರಾಮ್ಚರಣ್ ಹುಟ್ಟುಹಬ್ಬದ ಪ್ರಯುಕ್ತ ಅವರ 15ನೇ ಸಿನಿಮಾದ ಟೈಟಲ್ಅನ್ನ ರಿವೀಲ್ ಮಾಡಲಾಗಿದೆ. ರಾಮ್ಚರಣ್ ನಟನೆಯ 15ನೇ ಸಿನಿಮಾಗೆ ʻಗೇಮ್ ಚೇಂಜರ್ʼ ಎಂಬ ಶೀರ್ಷಿಕೆಯನ್ನ ಫೈನಲ್ ಮಾಡಲಾಗಿದೆ. ʻಗೇಮ್ ಚೇಂಜರ್ʼ ಟೈಟಲ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಮ್ಚರಣ್ ನಟನೆಯ ʻಗೇಮ್ ಚೇಂಜರ್ʼ ಸಿನಿಮಾಗೆ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ರಾಮ್ಚರಣ್ಗೆ ನಾಯಕಿಯಾಗಿ ಕಿಯಾರಾ ನಟಿಸುತ್ತಿದ್ದಾರೆ. 170 ಕೋಟಿ ರೂಪಾಯಿ ಬಜೆಟ್ನಲ್ಲಿ ʻಗೇಮ್ ಚೇಂಜರ್ʼ ಸಿನಿಮಾ ಸಿದ್ಧವಾಗ್ತಿದ್ದು, ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.