ರಾಮ ಮಂದಿರ ತೀರ್ಪು ಕಾನೂನನ್ನು ಆಧರಿಸಿದೆ ಹೊರತು, ಧರ್ಮವನ್ನಲ್ಲ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ವಾರಣಾಸಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾವು ನಿವೃತ್ತಿಯಾದ ಆರು ತಿಂಗಳ ನಂತರ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ರಾಮ ಜನ್ಮ ಭೂಮಿ ತೀರ್ಪು ಅವರ ವೈಯಕ್ತಿಕ ನಿರ್ಧಾರವಲ್ಲ ಎಂದು ಹೇಳಿದ್ದವು. ಆದರೆ, ಈ ಬಗ್ಗೆ ಮಾತನಾಡಿದ ಗೊಗೊಯ್ ಅದು ನನ್ನ ತೀರ್ಪಲ್ಲ ಸುಪ್ರೀಂ ಕೋರ್ಟ್ ತೀರ್ಪು ಎಂದು ತಿರುಗೇಟು ನೀಡಿದ್ದಾರೆ.
ಐದು ಜನ ನ್ಯಾಯಧೀಶರು ನಾಲ್ಕು ತಿಂಗಳ ಕಾಲ 900 ಪುಟಗಳ ತೀರ್ಪನ್ನು ಬರೆದಿದ್ದಾರೆ. ತೀರ್ಪು ಸಂವಿಧಾನವನ್ನ ಆಧರಿಸಿದೆಯೇ ಹೊರತು ಧರ್ಮವನ್ನಲ್ಲ ನ್ಯಾಯಾಧೀಶರಿಗೆ ಸಂವಿಧಾನವೇ ಧರ್ಮ ಎಂದು ಹೇಳಿದ್ದಾರೆ.

2019ರಲ್ಲಿ ಗೊಗೊಯ್ ಸುಪ್ರೀಂ ಕೋರ್ಟ್ ಪೀಠದ ನೇತೃತ್ವವನ್ನ ವಹಿಸಿದ್ದರು. ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ದಾವೆಗಳ ತೀರ್ಪನ್ನು ನೀಡಿದ್ದರು. ವಿವಾದಿತ ಭೂಮಿಯನ್ನು ರಾಮ ಜನ್ಮ ಭೂಮಿ ಟ್ರಸ್ಟ್ಗೆ ನೀಡಿತ್ತು ಮತ್ತು ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಆದೇಶಿಸಿತ್ತು. ಪ್ರಸ್ತುತ ಫೈಜಾಬಾದ್ ಬಳಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಫ್ರಾನ್ಸ್ನಿಂದ 36 ಫೈಟರ್ ಜೆಟ್ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಈ ಒಪ್ಪಂದದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಈ ಹಿಂದೆ ಗೊಗೊಯ್ರವರು ತಮ್ಮನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದರು.