ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಭಾರತದ ಐತಿಹಾಸಿಕ ಕ್ಷೇತ್ರ ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಭಗವಾ ಧ್ವಜಾರೋಹಣ ನೆರವೇರಲಿದೆ.

ರಾಮ ಮಂದಿರದ ಧ್ವಜಾರೋಹಣ ಸಮಾರಂಭವು ಇಂದು ನೆರವೇರುತ್ತಿರುವುದು ಬಹಳ ವಿಶೇಷವಾಗಿದ್ದು, ಈ ಐತಿಹಾಸಿಕ ಧ್ವಜಾರೋಹಣ ಸಮಾರಂಭವು ಇಂದೇ ಯಾಕೆ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇಂದು ವಿವಾಹ ಪಂಚಮಿಯ ಶುಭ ದಿನವಾಗಿದ್ದು, ಶ್ರೀ ರಾಮಚಂದ್ರ ಮತ್ತು ಮಾತೆ ಸೀತಾ ದೇವಿಯ ವಿವಾಹದ ಪವಿತ್ರ ದಿನವಾಗಿದೆ. ಮಾರ್ಗಶಿರ ಮಾಸದ ಐದನೇ ದಿನವಾದು ಇಂದು ದಶರಥ ಪುತ್ರ ಶ್ರೀ ರಾಮನು ಜನಕ ಮಹಾರಾಜನ ಮಗಳಾದ ಸೀತೆಯನ್ನು ವರಿಸಿದ ದಿನವಾಗಿದೆ. ಆದ್ದರಿಂದ ಈ ಶುಭ ವಿವಾಹ ಪಂಚಮಿಯ ದಿನವೇ ಅಯೋಧ್ಯೆಯಲ್ಲಿ ಧ್ವಜಾರೋಹಣ ಸಮಾರಂಭವನ್ನು ನಡೆಸಲಾಗುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.








