ರಾಜಸ್ಥಾನದಲ್ಲಿ ಪ್ರಮುಖ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಾಮೇದಿ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
ಸುಖದೇವ್ ಸಿಂಗ್ ಗೊಗಾಮೇದಿ ಹತ್ಯೆ ವಿರೋಧಿಸಿ ಬುಧವಾರ ರಾಜಸ್ಥಾನ ಬಂದ್‌ಗೆ ಕರೆ ನೀಡಲಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಎನ್ನುವ ಸಣ್ಣ ಸಂಘಟನೆ ಹುಟ್ಟುಹಾಕಿದ್ದ ಸುಖದೇವ್‌ನನ್ನು ಜೈಪುರದಲ್ಲಿನ ಆತನ ನಿವಾಸದಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಾಗಿ ಕೆಲಹೊತ್ತಲ್ಲೇ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ಗುರುತಿಸಿಕೊಂಡಿದ್ದ ಗ್ಯಾಂಗ್‌ಸ್ಟರ್ ರೋಹಿತ್ ಗೊಡಾರಾ, ಇದು ತನ್ನದೆ ಕೃತ್ಯ ಅಂತ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೊಣೆ ಹೊತ್ತುಕೊಂಡಿದ್ದ.
ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ನಡೆದ ಈ ಹತ್ಯೆ ಇದೀಗ ಬಿಜೆಪಿಗೆ ಸವಾಲಾಗಿ ಕಾಡ್ತಿದೆ. ಇನ್ನೂ ಅಧಿಕಾರಕ್ಕೆ ಬಂದು ಎರಡೇ ದಿನಗಳಲ್ಲಿ ಈ ಹತ್ಯೆ ನಡೆದಿರೋದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.