ನಮ್ಮ ಸಂಸ್ಥೆಗಳನ್ನು ವಶಕ್ಕೆ ಪಡೆದ ಯಂತ್ರಗಳ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಬಳಿ ಈಗ ಅನಿಯಮಿತ ಅಧಿಕಾರ, ಹಣ ಇದ್ದು, ಯಾರನ್ನೂ ಬೇಕಾದರೂ ಖರೀದಿಸಬಹುದು. ಹೆದರಿಸಬಹುದು. ಇದುವೇ ಗೋವಾದಲ್ಲಿ ನಡೆದಿದ್ದು ಎಂದರು.
ಕೇರಳದಲ್ಲಿ ಮಹಾತ್ಮಗಾಂಧಿ 1925ರಲ್ಲಿ ನೆಟ್ಟಿದ್ದ ಮಾವಿನ ಮರ ವೀಕ್ಷಿಸಿದ್ದನ್ನು ಸ್ಮರಿಸಿದ ಅವರು, ಕೇರಳದಲ್ಲಿ ನಡೆದ ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಅಭೂತಪೂರ್ವ ಬೆಂಬಲ ದೊರೆತಿದೆ. ಜನರು ಹೊರಗೆ ಬರುತ್ತಿದ್ದಾರೆ ಎಂದರು.

ಭಾರತ್ ಜೋಡೊ ಪಾದಯಾತ್ರೆ ದೇಶಾದ್ಯಂತ ನಡೆಯುತ್ತದೆ. ಇದು ದೇಶವನ್ನು ಒಗ್ಗೂಡಿಸುವ ಕಾರ್ಯಕ್ರಮ. ಯುದ್ಧ ಅಲ್ಲ. ಜನರು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂಬುದನ್ನು ತೋರಿಸಿಕೊಡುವ ಕಾರ್ಯಕ್ರಮ ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನೂತನ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸುವರು ಪಕ್ಷದ ಸಿದ್ಧಾಂತ ಹಾಗೂ ನಡೆದು ಬಂದ ಹಾದಿಯ ಜೊತೆಗೆ ಭವಿಷ್ಯದಲ್ಲಿ ಇದನ್ನು ಉಳಿಸಿಕೊಂಡು ಹೋಗುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.







