ತೆಲಂಗಾಣದಲ್ಲಿ ರಾಹುಲ್ ಗಾಂಧಿ ಮಹತ್ವದ 6 ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದ್ದಾರೆ. ಈ ಕುರಿತು ವಿಜಯಭೇರಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ನಮ್ಮ ಸಭೆಯನ್ನ ತಡೆಯಲು ಯಾರ ಕೈಯ್ಯಲ್ಲು ಸಹ ಸಾಧ್ಯವಾಗಿಲ್ಲ. ವಿಪಕ್ಷಗಳ ಮೇಲೆ ಬೇಕಾಗಿ ಕೇಸ್ ದಾಖಲಿಸುತ್ತಿದ್ದಾರೆ. ಆದರೆ ತೆಲಂಗಾಣದ ಮುಖ್ಯಮಂತ್ರಿಯ ಮೇಲೆ ಯಾವುದೇ ಕೇಸ್ ದಾಖಲಿಸಲು ಸಾಧ್ಯವಾಗಿಲ್ಲ. ಅವರೆಲ್ಲಾ ಪ್ರಧಾನಿ ಮೋದಿಯವರ ಜೊತೆ ಚೆನ್ನಾಗಿದ್ದಾರೆ, ಅದಕ್ಕಾಗಿ ಅವರ ಮೇಲೆ ಯಾವುದೇ ಕೇಸ್ಗಳಿಲ್ಲ. ಅವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದರು ಸಹ ಯಾವ ಈ.ಡಿ, ಸಿ.ಬಿ.ಐ ಮೇಲೂ ಸಹ ಕೇಸ್ ಹಾಕಲು ಸಾಧ್ಯವಾಗಿಲ್ಲ. ನಿಮ್ಮ ಆಸೆ, ಆಕಾಂಕ್ಷೆಗಳನ್ನ ನೆರವೇರಿಸಲು ಸೋನಿಯಾಗಾಂದಿ ಬಹಳಷ್ಟು ಶ್ರಮಪಟ್ಟಿದ್ದಾರೆ. ನಿಮಗಾಗಿಯೇ ಅವರು ತೆಲಂಗಾಣ ಎನ್ನುವ ಪ್ರತ್ಯೇಕ ರಾಜ್ಯವನ್ನ ಸೃಷ್ಟಿ ಮಾಡಿದ್ದರು. ಆದರೆ ನಾವು ಮಹಿಳೆಯರಿಗಾಗಿ ಮತ್ತು ರೈತರಿಗಾಗಿ, ಯುವಕರಿಗಾಗಿ, ದಲಿತರಿಗಾಗಿ ನಾವು ತೆಲಂಗಾಣ ರಾಜ್ಯ ಮಾಡಿದ್ದೇವು, ಈ ಭರವಸೆಯನ್ನ ಸಹ ನಾವೇ ಕೊಟ್ಟಿದ್ದೇವು. ವಿನಃ ಕೆಸಿಆರ್ ಗಾಗಿ ನಾವು ಈ ರಾಜ್ಯವನ್ನ ಮಾಡಿಲ್ಲ ಎಂದರು.
ಈ ಸುದ್ದಿಯನ್ನು ಸಹ ಓದಿ: ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ಧೂಳೀಪಟ: ಭಾರತದ ಮುಡಿಗೆ ಏಷ್ಯಾಕಪ್..!
ರಾಹುಲ್ ಗಾಂಧಿ ಘೋಷಿಸಿದ 6 ಗ್ಯಾರಂಟಿ ಯೋಜನೆಗಳು ಇಲ್ಲಿದೆ ನೋಡಿ.
1.ಮನೆಯಿಲ್ಲದ ಎಲ್ಲಾ ಕುಟುಂಬಗಳಿಗೂ ಸಹ 5 ಲಕ್ಷ ರೂಪಾಯಿ ಕೊಡಲಾಗುವುದು.
2. ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ಮಹಿಳೆಗೆ 2,500ನೀಡುತ್ತೇವೆ.
3. ಕೇವಲ 500ರೂ ಗಳಿಗೆ ಸಿಲಿಂಡರ್ ನೀಡಲಾಗುವುದು.
4.ಮಹಿಳೆಯರೆಲ್ಲರಿಗೂ ಆರ್ಟಿಸಿ ಬಸ್ಗಳಲ್ಲಿ ಫ್ರೀ ಪ್ರಯಾಣ .
5. ಎಲ್ಲ ಮಹಿಳೆಯರಿಗೂ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಫ್ರೀ ನೀಡುತ್ತೇವೆ .
6. ಯುವಜನತೆಗೆ 5 ಲಕ್ಷದವರೆಗೆ ವಿಧ್ಯಾಭ್ಯಾಸ ಸಹಾಯ ಮಾಡಲಾಗುವುದು