ಕನ್ನಡ ಚಿತ್ರರಂಗದ ಸ್ಟಾರ್ ನಟಿ ಮಾಲಾಶ್ರೀ ಪುತ್ರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮೊದಲ ಚಿತ್ರದಲ್ಲೇ ಬಂಪರ್ ಹೊಡೆದರು ಎಂಬ ಸತ್ಯ ಬಹುತೇಕ ಮಂದಿಗೆ ತಿಳಿದಿಲ್ಲ.
ಹೌದು, ಮಾಲಾಶ್ರೀ ಪುತ್ರಿ ರಾಧನಾ ರಾಮ್ ಮೊದಲ ಚಿತ್ರದಲ್ಲೇ ಏನೆಲ್ಲಾ ಬಂಪರ್ ಹೊಡೆದರು ಎಂದು ತಿಳಿಯುವುದಕ್ಕಿಂತ ಮೊದಲು ಮಾಲಾಶ್ರೀ ಅವರ ಬಗ್ಗೆ ತಿಳಿಯೊಣ.
ಮಾಲಾಶ್ರೀ 15ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಾಘವೇಂದ್ರ ರಾಜ್ ಕುಮಾರ್ ಎರಡನೇ ಚಿತ್ರ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮಾಲಾಶ್ರೀ ದಶಕಗಳ ಕಾಲ ಕನ್ನಡ ಚಿತ್ರರಂಗದಕ್ಕಿ ಹೀರೋನಂತೆ ಮೆರೆದಿದ್ದರು.
ನಂಜುಂಡಿ ಕಲ್ಯಾಣ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಿತು. ರಾಜ್ಯದ ಹಲವು ಥಿಯೇಟರ್ ಗಳಲ್ಲಿ ವರ್ಷಗಟ್ಟಲೆ ಈ ಚಿತ್ರ ಓಡಿ ಕಲೆಕ್ಷನ್ ನಲ್ಲಿ ಇತಿಹಾಸ ಬರೆಯಿತು. ಮಾಲಾಶ್ರೀ ನಟಿಸಿದ ಒಳಗೆ ಸೇರಿದರೆ ಗುಂಡು ಹಾಡು ಕುಡುಕರ ರಾಷ್ಟ್ರಗೀತೆ ಆಗಿಬಿಟ್ಟಿತು.
ಮಾಲಾಶ್ರೀ ಸುಮಾರು 3 ದಶಕಗಳ ಕಾಲ ಕನ್ನಡ ಚಿತ್ರರಂಗದ ಟಾಪ್ ನಟಿ ಎನಿಸಿಕೊಂಡಿದ್ದರು. ಯಾವುದೇ ಪಾತ್ರ ಕೊಟ್ಟರೂ ಸೈ ಎನಿಸಿಕೊಳ್ಳುವಂತೆ ನಟಿಸುತ್ತಿದ್ದ ಮಾಲಾಶ್ರೀ ಆಕ್ಷನ್ ಚಿತ್ರಗಳಲ್ಲಿ ಹೀರೊಗಳಿಗೆ ಸರಿಸಮಾನವಾಗಿ ನಟಿಸಿ ಮನೆ ಮಾತಾಗಿದ್ದರು.
ಮಾಲಾಶ್ರೀಯವರು ಮಗಳು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ತಾಯಿ ಮಾಲಾಶ್ರೀ ಅಂತೆ ಗಮನ ಸೆಳೆಯುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲ. ದರ್ಶನ್ ಹೇಳಿದಂತೆ ರಾಧಾನಾ ರಾಮ್ ಚಿತ್ರಕ್ಕೆ ಅಚ್ಚರಿ ಎಂಟ್ರಿ ಆದರೂ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಕನ್ನಡ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದ ರಾಧಾನಾ ರಾಮ್ ಗೆ ಮೊದಲ ಚಿತ್ರದಲ್ಲೇ ಸ್ಟಾರ್ ನಟ ದರ್ಶನ್ ಜೊತೆ ನಟಿಸುವ ಯೋಗ ಕೂಡಿ ಬಂದಿದೆ. ಮತ್ತೊಂದು ವಿಶೇಷ ಅಂದರೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಾಕ್ ಲೈಕ್ ಪ್ರೊಡಕ್ಷನ್ ಮೂಲಕ ತೆರೆ ಮೇಲೆ ಬರುತ್ತಿರುವುದು. ಇದೆಲ್ಲದರ ನಡುವೆ ಆಕೆಯ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಹಲವರಲ್ಲಿದೆ.
ರಾಧಾನಾ ರಾಮ್ ಅವರು ತಮ್ಮ ಮೊದಲ ಚಿತ್ರಕ್ಕೆ ಕನ್ನಡದ ಯಾವ ನಟಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಾಲಾಶ್ರೀ ಮಗಳು ರಾಧಾನಾ ರಾಮ್ ಅವರು ತಮ್ಮ ಮೊದಲ ಚಿತ್ರಕ್ಕೆ ಬರೋಬ್ಬರಿ 25 ರಿಂದ 28 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ.
ಇದು ಅವರ ಮೊದಲ ಚಿತ್ರವಾಗಿದ್ದು ಮೊದಲ ಚಿತ್ರಕ್ಕೆ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ರಾಧಾನಾ ರಾಮ್ ಅವರಿಗೆ ಕೊಡಲಾಗುತ್ತಿದೆ. ಮುಂದೊಂದು ದಿನ ರಾಧಾನಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರು ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ.