ಅದು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ. ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ ಆದ್ರೆ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳದ್ದೇ ಕಾರುಬಾರು. ಇದೆ ರಸ್ತೆ ತನ್ನಲ್ಲಿರುವ ಗುಂಡಿಗಳಿಗೆ ಅನೇಕ ವಾಹನ ಸವಾರರನ್ನ ಬಲಿ ಪಡೆದಿದೆ. ಈ ರಸ್ತೆಯಲ್ಲಿ ಹೋಗೋ ಗಾಡಿ ಮತ್ತು ಬಾಡಿಗಳು ಎರಡು ರಿಪೇರಿಗೆ ಬರ್ತಾ ಇವೆ. ಇಲ್ಲಿನ ನಿವಾಸಿಗಳು, ವ್ಯಾಪಾರಿಗಳು ರಸ್ತೆ ಧೂಳಿನಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಕಂಗೆಟ್ಟು ಹೋಗಿದ್ದಾರೆ. ಇಷ್ಟಾದ್ರು ಪಾಲಿಕೆ ಮಾತ್ರ ಇತ್ತ ಚಿತ್ತ ಹರಿಸಿಲ್ಲ. ಇದರಿಂದ ರೊಚ್ಚಿಗೆದ್ದ ಜನರು ಇಂದು ಪಾಲಿಕೆ ಪ್ರತಿಕೃತಿಯ ಶವ ಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಗುಂಡಿಗಳ ನರಕ ದರ್ಶನ.. ವಿನೂತನ ಪ್ರತಿಭಟನೆ.!!
ಇದು ಬೆಂಗಳೂರಿನಿಂದ ರಾಜ್ಯ ರಾಜಧಾನಿಯನ್ನ ಕಟ್ಟಿದ ನಾಡಪ್ರಭು ಕೆಂಪೇಗೌಡರ ಊರು ಮಾಗಡಿಗೆ ಹೋಗುವ ರಸ್ತೆ ರಾಜ್ಯ ಹೆದ್ದಾರಿ. ಆದ್ರೆ ಇದನ್ನ ರಸ್ತೆ ಅಂತ ಕರೆಯಲು ಸಾಧ್ಯವೇ ಇಲ್ಲ ಬಿಡಿ. ಅಷ್ಟರ ಮಟ್ಟಿಗೆ ಈ ರಸ್ತೆ ಅದ್ವಾನವಾಗಿದೆ. ಎಲ್ಲಿ ನೋಡಿದ್ರು ಗುಂಡಿ, ಧೂಳು, ಕೆಸರು. ಈ ರಸ್ತೆಯಲ್ಲಿ ಸಂಚಾರ ಮಾಡೋ ವಾಹನ ಸವಾರರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಈ ರಸ್ತೆ ನಿತ್ಯ ನರಕವನ್ನೇ ತೋರಿಸ್ತಾ ಇದೆ. ಆದ್ರೆ ಪಾಲಿಕೆ ಮಾತ್ರ ಈ ರಸ್ತೆಗೂ ನಮಗೂ ಸಂಬಂಧವೆ ಇಲ್ಲ ಅನ್ನೋ ಹಾಗೆ ವರ್ತನೆ ಮಾಡ್ತಾ ಕಣ್ಣುಮುಚ್ಚಿ ಕುಳಿತಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ಕರ್ನಾಟಕ ರಾಜ್ಯ ಕಾರ್ಮಿಕ ಒಕ್ಕೂಟದ ನೇತೃತ್ವದಲ್ಲಿ ಇಂದು ಬಿಬಿಎಂಪಿಯ ಶವದ ರೂಪದ ಪ್ರತಿಕೃತಿಯನ್ನು ಅಂತ್ಯ ಸಂಸ್ಕಾರವನ್ನ ಇದೆ ರಸ್ತೆಗುಂಡಿಯಲ್ಲಿ ಮಾಡಿ ಹಾಲು ತುಪ್ಪ ಬಿಟ್ಟು ಗೋಳಾಡಿದ್ರು.
ಮಾಗಡಿ ರಸ್ತೆಯ ಸುಂಕದಕಟ್ಟೆ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿರುವ ಗುಂಡಿಗಳ ಮುಂದೆ, ಬಿಬಿಎಂಪಿ ಪ್ರತಿಕೃತಿ ಮಾಡಿ, ಚಟ್ಟದ ಮೇಲೆ ಮಲಗಿಸಿ, ಸುತ್ತ ಬಾಯಿ ಬಡಿದುಕೊಂಡು ಗೋಳೋ ಅಂತಅಳುತ್ತಾ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡ್ತಾ ಇರೋದು, ರಸ್ತೆ ಗುಂಡಿ ಮುಚ್ಚದ ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ. ನಿತ್ಯ ಇಲ್ಲಿ ವಾಹನ ಸವಾರರು ಅನುಭವಿಸುತ್ತಿರೋ ಕಷ್ಟ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಕಾಣಿಸ್ತಾ ಇಲ್ಲ.ಇನ್ನು ಪಾಲಿಕೆ ಅಣುಕು ಶವಯಾತ್ರೆಯನ್ನ ಇದೆ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಇದೆ ರಸ್ತೆಯಲ್ಲೆ ಇದ್ದ ದೊಡ್ಡ ಗುಂಡಿಯಲ್ಲಿ ಮುಚ್ಚಿ, ಅದೇ ಸಮಾಧಿಗೆ ಹೂ ಹಾರ ಹಣ್ಣುಗಳನ್ನ ಇಟ್ಟು ಪೂಜೆ ಮಾಡಿ ಹಾಲು ತುಪ್ಪ ಬಿಟ್ಟು ಪಾಲಿಕೆಯ ಅಂತ್ಯಸಂಸ್ಕಾರ ಮಾಡೋ ಮೂಲಕ ಪಾಲಿಕೆಯ ಮಾನವನ್ನ ಸಾರ್ವಜನಿಕವಾಗಿ ಹರಾಜು ಹಾಕಿ, ಆಕ್ರೋಶ ವ್ಯಕ್ತಪಡಿಸಿ ಗುಂಡಿ ಮುಚ್ಚುವಂತೆ ಆಗ್ರಹಿಸಲಾಯಿತು.
ಇನ್ನು 11 ದಿನಗಳಲ್ಲಿ ಗುಂಡಿಗಳನ್ನ ಮುಚ್ಚದಿದ್ರೆ,ಇಂದು ಅಂತ್ಯಸಂಸ್ಕಾರ ಮಾಡಿದ್ದೇವೆ.11 ದಿನಕ್ಕೆ ಸರಿಯಾಗಿ ಪಾಲಿಕೆ ಕೇಂದ್ರ ಕಚೇರಿ ಮುಂದೆ ತಲೆ ಬೋಳಿಸಿಕೊಂಡು ತಿಥಿ ಕಾರ್ಯವನ್ನು ಮಾಡಿ ಮುಗಿಸುವುದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ರು. ಒಟ್ಟಾರೆ ನಮ್ಮ ಪಾಲಿಕೆಗೆ ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್, ಮುಖ್ಯಮಂತ್ರಿ ಬೊಮ್ಮಾಯಿ, ವಿರೋಧ ಪಕ್ಷಗಳು ಶಾಸಕ, ಸಚಿವರು ಎಲ್ಲರೂ ಕ್ಲಾಸ್ ತೆಗೆದುಕೊಂಡಿದ್ದಾಯ್ತು. ಈಗ ಸಾರ್ವಜನಿಕರ ಸರದಿ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ತಾರಾ..? ಆ ದೇವರೇ ಬಲ್ಲ.