ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ ಜೋಡೋ ಪಾದಯಾತ್ರೆಯೂ ಮಧ್ಯಪ್ರದೇಶ ಪ್ರವೇಶಿಸಿದ್ದು ಯಾತ್ರೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಪುತ್ರ ರೆಹಾನ್ ವಾದ್ರಾ ಹೆಜ್ಜೆ ಹಾಕಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬೋರ್ಗಾಂವ್ನಿಂದ ಎರಡನೇ ದಿನದ ಪಾದಯಾತ್ರೆ ಆರಂಭಿಸಿದ ರಾಹುಲ್ ಹಾಗೂ ಪ್ರಿಯಾಂಕರನ್ನು ನೋಡಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರೂ ಮತ್ತು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಯಾತ್ರೆಯಲ್ಲಿ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಪಾದಯಾತ್ರೆಯಲ್ಲಿಕಾಣಿಸಿಕೊಂಡರು ಮತ್ತು ಯಾತ್ರೆಯೂ ಮಧ್ಯಪ್ರದೇಶದಲ್ಲಿ 380 ಕಿಲೋಮೀಟರ್ ಕ್ರಮಿಸಿ ಡಿಸೆಂಬರ್ 4ರಂದು ರಾಜಸ್ಥಾನ ಪ್ರವೇಶಿಸಲಿದೆ.
ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆ ಕೂಗು ಪುನಃ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಯಾತ್ರೆಯ ಭಾಗವಾಗಿದ್ದಾರೆ ಮತ್ತು ರಾಜಸ್ಥಾನ ಪ್ರವೇಶಿಸುವ ಮುನ್ನ ಸಚಿನ್ ಪೈಲಟ್ ಯಾತ್ರೆಯಲ್ಲಿ ಕಾಣಿಸಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.