• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

ಪ್ರತಿಧ್ವನಿ by ಪ್ರತಿಧ್ವನಿ
September 12, 2026
in Top Story
0
ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’
Share on WhatsAppShare on FacebookShare on Telegram

ಬೆಂಗಳೂರು: ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ಮತ್ತು ವಿದೇಶಿ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ವಿದೇಶದಲ್ಲಿ ಹೂಡಿಕೆ ಮಾಡುವುದು ಕಾನೂನುಬಾಹಿರವಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಭಾರತೀಯರು ವಿದೇಶಗಳಲ್ಲಿ ಹೂಡಿಕೆ ಮಾಡುವಂತೆ ಹಲವು ಸಂದರ್ಭಗಳಲ್ಲಿ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಜಾರಕಿಹೊಳಿ ಕುಟುಂಬದ ವಿದೇಶಿ ಹೂಡಿಕೆಗಳ ಬಗ್ಗೆ ಅಕ್ರಮದ ಆರೋಪ ಮಾಡುತ್ತಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

 

ಜಾರಿ ನಿರ್ದೇಶನಾಲಯದ ದಾಳಿಯಲ್ಲಿ ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳು, ನಗದು ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ ಎಂದು ಇಡಿ ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಇಡಿ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಆರೋಪಗಳಿವೆ ಹೊರತು ಅವುಗಳನ್ನು ಸಾಬೀತುಪಡಿಸುವ ಬಲವಾದ ಸಾಕ್ಷ್ಯಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.

DK ಸರ್ಕಾರದಲ್ಲೂ Siddaramaiah ಸಹಕಾರ  ಮರೆಯದ Madhu Bangarappa | #pratidhvani

ಕಾಂಗೋ, ಕೆನಡಾ ಸೇರಿದಂತೆ ಯಾವುದೇ ದೇಶದಲ್ಲಿ ಹೂಡಿಕೆ ಮಾಡುವುದು ತಪ್ಪಲ್ಲ. ಆದರೆ ಆ ಹೂಡಿಕೆಗಳು ಲಂಚದ ಹಣದಿಂದ ನಡೆದಿವೆ ಎಂದು ಆರೋಪಿಸುವುದಾದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಅಥವಾ ವಿರೋಧ ಪಕ್ಷದವರು ಬಹಿರಂಗಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.ಇಡಿ ದಾಳಿಗಳು ಮತ್ತು ತನಿಖೆಗಳ ಯಶಸ್ಸಿನ ಪ್ರಮಾಣದ ಬಗ್ಗೆಯೂ ಪ್ರಶ್ನಿಸಿರುವ ಅವರು, ಕಳೆದ ಕೆಲವು ವರ್ಷಗಳಲ್ಲಿ ನಡೆದಿರುವ ಅನೇಕ ದಾಳಿಗಳ ನಂತರ ಎಷ್ಟು ಪ್ರಕರಣಗಳಲ್ಲಿ ಅಂತಿಮವಾಗಿ ಶಿಕ್ಷೆಯಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

ಗುತ್ತಿಗೆ ಅಕ್ರಮ ಹಾಗೂ ವಿದೇಶಿ ಪ್ರವಾಸಗಳ ವಿಚಾರವನ್ನೂ ಪ್ರಸ್ತಾಪಿಸಿರುವ ಪ್ರಿಯಾಂಕ್ ಖರ್ಗೆ, ಕೇವಲ ಸತೀಶ್ ಜಾರಕಿಹೊಳಿ ಅಥವಾ ಅವರ ಕುಟುಂಬದವರಷ್ಟೇ ಅಲ್ಲದೆ, ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರೂ ತಮ್ಮ ಪಾಸ್‌ಪೋರ್ಟ್ ಮತ್ತು ವಿದೇಶಿ ವ್ಯವಹಾರಗಳ ವಿವರಗಳನ್ನು ಬಹಿರಂಗಪಡಿಸಿ ತನಿಖೆಗೆ ಒಳಪಡಲಿ ಎಂದು ಆಗ್ರಹಿಸಿದ್ದಾರೆ.ವಿದೇಶಿ ಹೂಡಿಕೆಗಳ ವಿಚಾರದಲ್ಲಿ ಎಲ್ಲರಿಗೂ ಒಂದೇ ರೀತಿಯ ಮಾನದಂಡ ಇರಬೇಕು. ಆರೋಪಗಳಿದ್ದರೆ ತನಿಖೆ ನಡೆಯಲಿ, ಆದರೆ ತನಿಖೆಯ ಹೆಸರಿನಲ್ಲಿ ರಾಜಕೀಯ ಗುರಿ ಸಾಧಿಸುವ ಪ್ರಯತ್ನ ನಡೆಯಬಾರದು ಎಂಬುದು ಅವರ ವಾದವಾಗಿದೆ.

Narendra Modi : ಗ್ಲೋಬಲ್‌ ಸೌತ್‌ ದೇಶಗಳ ನಾಯಕತ್ವ ವಹಿಸಲು ಭಾರತ ಸಿದ್ಧವಿದೆ..  #pmmodi

ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರಿಗೆ ಮಾನಸಿಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರು ಹಿಂದೆ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದರೆ ನ್ಯಾಯಾಲಯದಲ್ಲಿ ಆರೋಪಗಳು ತಳ್ಳಿಹೋದ ಬಳಿಕವೂ ಅವರು ಕ್ಷಮೆ ಕೇಳಲಿಲ್ಲ ಎಂದು ಟೀಕಿಸಿದ್ದಾರೆ.

ಅಲ್ಲದೆ, ಬೇರೆ ಪಕ್ಷಗಳಲ್ಲಿದ್ದಾಗ ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಕೆಲವರು ಬಿಜೆಪಿ ಸೇರ್ಪಡೆಯಾದ ಬಳಿಕ ಶುದ್ಧರಾದವರಂತೆ ವರ್ತಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

 

ಇದಕ್ಕೂ ಮುನ್ನ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಇಡಿ ಶೋಧ ನಡೆಸಿದ್ದು, ವಿದೇಶಿ ಹೂಡಿಕೆಗಳು, ಆಫ್ರಿಕಾದ ಗಣಿಗಾರಿಕೆ ಸಂಸ್ಥೆಗಳಲ್ಲಿನ ಪಾಲು ಹಾಗೂ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿದೆ. ಇಡಿ ಪ್ರಕಾರ, ಶೋಧ ಕಾರ್ಯಾಚರಣೆಯಲ್ಲಿ ಸುಮಾರು ₹3.3 ಕೋಟಿ ಲೆಕ್ಕಕ್ಕೆ ಸಿಗದ ನಗದು ಮತ್ತು ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

 

 

Tags: Africa InvestmentBJP CongressCongo InvestmentCongress NewsED InvestigationED raidsED SearchEnforcement DirectorateFEMAForeign InvestmentKarnataka CongressKarnataka Home Ministerkarnataka newsKarnataka PoliticsKarnataka Politics 2026political newsPriyank Khargepriyank kharge statementSatish JarkiholiSatish Jarkiholi ED Raid
Previous Post

CSKನಲ್ಲಿ ಧೋನಿಗೆ ಎಷ್ಟು ಷೇರು?ವದಂತಿಗೆ ಫ್ರಾಂಚೈಸಿ ಸ್ಪಷ್ಟನೆ ಇಲ್ಲಿದೆ

Next Post

ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು; ಭಾರತದ ಭದ್ರತಾ ಮಂಡಳಿ ಬೇಡಿಕೆಗೆ ಬ್ರಿಕ್ಸ್ ಬೆಂಬಲ

Related Posts

Horoscope for October 6: A lucky day for these 4 zodiac signs
Top Story

ಅಕ್ಟೋಬರ್ 8 ಗುರುವಾರದ ರಾಶಿಫಲ: ಯಾರಿಗೆ ಅದೃಷ್ಟ? ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ವಿವರ!

by ಪ್ರತಿಧ್ವನಿ
October 8, 2026
0

ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 8ರ ಗುರುವಾರ ಅತ್ಯಂತ ಪವಿತ್ರವಾದ ದಿನ. ಜಗದೊಡೆಯನಾದ ಶ್ರೀಮನ್ನಾರಾಯಣನ ಆರಾಧನೆಯಿಂದ ಸಕಲ ಐಶ್ವರ್ಯ, ಧನ-ಧಾನ್ಯಗಳು ಪ್ರಾಪ್ತಿಯಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ.

Read moreDetails
ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

October 7, 2026
‘ನಾನು ಬದುಕಬೇಕು’ ಎಂದು ಅಂಗಲಾಚಿದ ಪೈಲಟ್; 45 ನಿಮಿಷ ಜೀವ ಉಳಿಸಲು ಹೋರಾಡಿದ ವೈದ್ಯರು ಹೇಳಿದ್ದೇನು ? 

‘ನಾನು ಬದುಕಬೇಕು’ ಎಂದು ಅಂಗಲಾಚಿದ ಪೈಲಟ್; 45 ನಿಮಿಷ ಜೀವ ಉಳಿಸಲು ಹೋರಾಡಿದ ವೈದ್ಯರು ಹೇಳಿದ್ದೇನು ? 

October 7, 2026
ರೆಪೊ ದರ ಏರಿಸಿದ RBI; ನಿಮ್ಮ ಸಾಲದ EMI ಎಷ್ಟು ಹೆಚ್ಚಾಗಬಹುದು?

ರೆಪೊ ದರ ಏರಿಸಿದ RBI; ನಿಮ್ಮ ಸಾಲದ EMI ಎಷ್ಟು ಹೆಚ್ಚಾಗಬಹುದು?

October 7, 2026
Jail term and ₹25,000 fine for woman who obtained government grants by creating a fake caste certificate

ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರದ ಅನುದಾನ ಪಡೆದ ಮಹಿಳೆಗೆ ಜೈಲು ಶಿಕ್ಷೆ ಹಾಗೂ ರೂ. 25,000 ದಂಡ

October 7, 2026
Next Post
ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು; ಭಾರತದ ಭದ್ರತಾ ಮಂಡಳಿ ಬೇಡಿಕೆಗೆ ಬ್ರಿಕ್ಸ್ ಬೆಂಬಲ

ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು; ಭಾರತದ ಭದ್ರತಾ ಮಂಡಳಿ ಬೇಡಿಕೆಗೆ ಬ್ರಿಕ್ಸ್ ಬೆಂಬಲ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada