
ಉತ್ತರ ಪ್ರದೇಶ:ಇತ್ತೀಚೆಗೆ ಜಂಕ್ ಫುಡ್ (Junk food)ನಿಂದ ನಾನಾ ರೀತಿಯ ಕಾಯಿಲೆಗಳು (Various diseases)ಬರುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ (Department of Health)ಸುತ್ತೋಲೆಗಳನ್ನು ಹೊರಡಿಸುತ್ತಲೆ ಇದೆ.ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮಧ್ಯಪ್ರದೇಶದ ಜಬಲ್ಪುರದಲ್ಲಿ ಮಾರಾಟಗಾರನೊಬ್ಬ ಮೋಮೋ Momo)ಹಿಟ್ಟನ್ನು ಕಾಲಿನಿಂದ ತುಳಿಯುತ್ತಿರುವ Trampled by foot)ವಿಡಿಯೋ ವೈರಲ್ ಆಗಿದೆ.
ಜಬಲ್ಪುರದ ಮೋಮೋ ಮಾರಾಟಗಾರನೊಬ್ಬ ದಿನನಿತ್ಯ ಹಿಟ್ಟನ್ನು ಕಾಲಿನಿಂದ ತುಳಿದು ಸಿದ್ದಪಡಿಸುವುದಲ್ಲದೆ. ಕಲುಷಿತ ನೀರನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಮೋಮೋ ಹಿಟ್ಟನ್ನು ತಯಾರಿಸುವ ವಿಡಿಯೋವನ್ನು ವ್ಯಕ್ತಿಯೊಬ್ಬ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಜಬಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರಿನನ್ವಯ ಮೋಮೋಸ್ ಮಾಡುತ್ತಿದ್ದ ರಾಜಸ್ಥಾನ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಲಾಗಿದೆ. ಇನ್ನು ಆರೋಪಿಗಳ ಅಂಗಡಿ ಬಾರ್ಗಿ ಪೊಲೀಸ್ ಠಾಣೆ ಬಳಿ ಇದ್ದು, ಪೊಲೀಸರು ಸೇರಿದಂತೆ ನೂರಾರು ಜನ ಆ ಅಂಗಡಿಯಲ್ಲಿ ಮೋಮೋಸ್ ತಿನ್ನುತ್ತಿದ್ದರು ಎಂದು ವರದಿಯಾಗಿದೆ