ನಂಜನಗೂಡು ತಾಲೂಕಿನ ಕಾಡಂಚಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ 20 ಬಡ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಬೆಳಕು ಕಾಣದೇ ಕತ್ತಲಿನಲ್ಲೇ ಜೀವನ ಸಾಗಿಸುತ್ತಿವೆ ಎಂದು ಹಲವು ಪ್ರತಿಧ್ವನಿ.ಕಾಂ ವರದಿ ಮಾಡಿತ್ತು. ಈ ವರದಿಯನ್ನು ಶಾಸಕರ ಆಪ್ತ ವಲಯಕ್ಕೂ ಪ್ರತಿಧ್ವನಿ ಮುಟ್ಟಿಸಿತ್ತು. ಇದೀಗ ಈ ನಂಜನಕೂಡಿ ಈ ಹಳ್ಳಿಯ ಸಮಸ್ಯೆಗೆ ಶಾಸಕ ಹರ್ಷವರ್ಧನ್ ಮುಕ್ತಿ ನೀಡಿದ್ದರಾರೆ.
ಈ ಹಳ್ಳಿಯ ವಿದ್ಯುತ್ ಸಮಸ್ಯೆ ನಿಜವಾದರೂ ಸಹ ವಾಸ್ತವ ಚಿತ್ರಣ ಬೇರೆ ರೀತಿಯದಾಗಿತ್ತು. ಹಲವು ತಿಂಗಳ ಹಿಂದೆ ತಹಸೀಲ್ದಾರರು ಸಮಸ್ಯೆ ಬಗೆಹರಿಸಲು ಬಂದಾಗ 20 ಬಡ ಕುಟುಂಬಗಳ ಮನೆಗೆ ಸಂಪಕ೯ ಕಲ್ಪಿಸುವ ಖಾಸಗಿ ವ್ಯಕ್ತಿಯದಾಗಿರುತ್ತದೆ. ಜಾಗ ಹೊಂದಿರುವ ವ್ಯಕ್ತಿ ತನ್ನ ಸಂಪೂಣ೯ ದಾಖಲೆಯನ್ನು ಅಧಿಕಾರಿಗಳ ಮುಂದಿಡುತ್ತಾನೆ. ಅದರ ಪ್ರಕಾರ ಜಾಗ ಆತನದಾಗಿರುತ್ತದೆ. ಬೇರೆ ಕಡೆಯಿಂದ ವಿದ್ಯುತ್ ಸಂಪಕ೯ ಕಲ್ಪಿಸಲು ಆ ಜನರು ಒಪ್ಪುತ್ತಿಲ್ಲ; ಈ ಕಡೆಯಿಂದ ಜಾಗವನ್ನು ಸೈಟ್ ಹೊಂದಿರುವ ವ್ಯಕ್ತಿ ಬಿಡುತ್ತಿಲ್ಲ, ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿರುತ್ತದೆ. ಈಗಾಗಿ ಸಮಸ್ಯೆ ಇತ್ಯಾಥ೯ವಾಗದೆ ಅಧಿಕಾರಿಗಳು ವಾಪಾಸ್ಸಾಗುತ್ತಾರೆ. ನಂತರ ಇದು ಪ್ರತಿಧ್ವನಿ.ಕಾಂ ನಲ್ಲಿ ಸುದ್ದಿಯಾಗುತ್ತದೆ. ಪ್ರತಿಧ್ವನಿ ಅಲ್ಲದೆ PeepalMedia.com ಕೂಡ ವರದಿ ಮಾಡಿತ್ತು.
Also Read : ಶಾಸಕ ಹರ್ಷವರ್ಧನ್ ಕ್ಷೇತ್ರದಲ್ಲಿ ಅವ್ಯವಸ್ಥೆ: ಕತ್ತಲೆಯಲ್ಲಿ ಜೀವನ ಕಳೆಯುತ್ತಿದೆ 20 ಬಡ ಕುಟುಂಬ!
ಶಾಸಕ ಬಿ.ಹಷ೯ವಧ೯ನ್ ಅವರ ಗಮನಕ್ಕೂ ಸಹ ನಮ್ಮ ವರದಿ ಬರುತ್ತದೆ ಇದಾದ ನಂತರ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸಹ ಮಧ್ಯ ಪ್ರವೇಶಿಸಿ ಸೈಟ್ ಹೊಂದಿರುವ ವ್ಯಕ್ತಿಯ ಮನವೊಲಿಸಿದ ಪರಿಣಾಮ ಆತ ಶಾಸಕರ ಕೋರಿಕೆಗೆ ಸ್ಪಂದಿಸಿ ಸುಮಾರು 10 ಗುಂಟೆ ಜಾಗವನ್ನು ದಾನವಾಗಿ ಬಿಟ್ಟು ಅವಕಾಶ ಮಾಡಿಕೊಟ್ಟ ಪರಿಣಾಮ ತಾಲ್ಲೂಕು ದಂಡಾಧಿಕಾರಿಗಳಾದ ಶಿವಮೂತಿ೯, ಸಹಾಯಕ ಕಾಯ೯ನಿವಾ೯ಹಕ ಅಭಿಯಂತರರಾದ ದೀಪಕ್, ತಾಲ್ಲೂಕು ಕಾಯ೯ ನಿವ೯ಹಕ ಅಧಿಕಾರಿಗಳಾದ ಶ್ರೀನಿವಾಸ್ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ವಿದ್ಯುತ್ ಸಂಪಕ೯ ಕಲ್ಪಿಸಿದ್ದಾರೆ.
ಏನೇ ಆಗಲಿ ಬಡ ಕುಟುಂಬಗಳಿಗೆ ವಿದ್ಯುತ್ ಕಲ್ಪಿಸಿದ ಶಾಸಕ ಬಿ.ಹಷ೯ವಧ೯ನ್ ಪ್ರತಿಧ್ವನಿಯಿಂದ ಧನ್ಯವಾದಗಳು.