ಮೈಸೂರಿನ ಜೆಎಸ್ಎಸ್ ಕಾಲೇಜು ಎದುರು ನಿರ್ಮಿಸಿರುವ ಗುಂಬಜ್ ಮಾದರಿ ಬಸ್ ನಿಲ್ದಾಣ ತೆರವು ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಯಾರ್ ಏನೆ ಅಂದರರೂ ಹಿಂದೆ ಸರಿವ ಮಾತೇ ಇಲ್ಲ ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಟಿಪ್ಪು ರೈಲಿನ ಹೆಸರು ಬದಲಿಸಿದ್ದೇನೆ ಮಹಿಷಾ ದಸರಾವನ್ನೂ ಮಟ್ಟಹಾಕಿದ್ದೇನೆ ಈ ವಿಚಾರದಲ್ಲೂ ನನ್ನ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ.
ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೆಆರ್ಡಿಐಎಲ್ ನಿರ್ಣಾಯಕ್ಕೆ ನಾನು ಬದ್ದನಿರುತ್ತೇನೆ ಅವರು ಕೊಟ್ಟ ಮಾದರಿಯಂತೆ ಕಟ್ಟಡ ನಿರ್ಮಾಣ ಮಾಡಲು ನನ್ನ ಅಭ್ಯಂತರವಿಲ್ಲ ಕೆಲ ಕಾಲ ಗಡುವು ಕೊಟ್ಟಿದೆ ಆ ಗಡುವಿಗೆ ನಾನೂ ಕಾಯುತ್ತೇನೆ ಸಾರ್ವಜನಿಕರ ಹಣದಲ್ಲಿ ಕಟ್ಟಿರುವ ಕಟ್ಟಡ ಯಾವ ಶಾಸಕನೂ, ಸಂಸದನು ಒಂದು ರೂಪಾಯಿ ಹಾಕಿ ಮಾಡಿಸಲ್ಲ ಅದು ಸಾರ್ವಜನಿಕರ ಹಣದಿಂದ ನಿರ್ಮಾಣವಾಗಿರೋದು ಎಂದು ಹೇಳಿದ್ದಾರೆ.
ಕೆಆರ್ಡಿಐಎಲ್ ಮಾದರಿಯಂತೆ ರೂಪಿಸಬೇಕು ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಒಂದು ಗಿಡ ನೀಡಬೇಕಾದರೂ ಅವರ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.







