ಟಾಲಿವುಡ್ನ ಸ್ಟಾರ್ ನಟರಾದ ರಾಮ್ಚರಣ್ ಹಾಗೂ ಜ್ಯೂನಿಯರ್ ಎನ್ಟಿಆರ್ ನಟನೆಯ ʻಆರ್ಆರ್ಆರ್ʼ ಸಿನಿಮಾದ ಬಗ್ಗೆ ಎಲ್ಲರೂ ಮಾತ್ನಾಡ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿದೆ. ಸೌತ್ ಇಂಡಿಯಾ ಸಿನಿಮಾಗಳತ್ತ ಹಾಲಿವುಡ್ ಮಂದಿ ತಿರುಗಿ ನೋಡುವಂತಾಗಿದೆ. ಇದಕ್ಕೆಲ್ಲ ಕಾರಣ ಆಗಿರೋದು ʻಆರ್ಆರ್ಆರ್ʼ ಸಿನಿಮಾದ ʻನಾಟು ನಾಟುʼ ಸಾಂಗ್ಮೊನ್ನೆಯಷ್ಟೇ ನಡೆದ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡಿಗೆ ʻಬೆಸ್ಟ್ ಒರಿಜಿನಲ್ ಸಾಂಗ್ʼ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ. ಈ ಹಿನ್ನೆಲೆ, ಚಿತ್ರರಂಗದ ಅನೇಕ ಕಲಾವಿದರು ʻಆರ್ಆರ್ಆರ್ʼ ಚಿತ್ರತಂಡಕ್ಕೆ ಶುಭಕೋರಿದ್ದಾರೆ. `ಆರ್ಆರ್ಆರ್’ ಸಿನಿಮಾ ಬಿಡುಗಡೆಯಾದಾಗ, ತೆಲಂಗಾಣದ ಬಿಜೆಪಿ ಅಧಕ್ಷ್ಯ ಬಂಡಿ ಸಂಜಯ್ ಕುಮಾರ್, ಚಿತ್ರವನ್ನ ಬ್ಯಾನ್ ಮಾಡ್ಬೇಕು, ಇಲ್ಲವಾದ್ರೆ ಥಿಯೇಟರ್ಗಳನ್ನ ಧ್ವಂಸ ಮಾಡ್ತೀವಿ ಅಂತ ಹೇಳಿದ್ರು. ಆದ್ರೀಗ ʻಆರ್ಆರ್ಆರ್ʼ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದಕ್ಕೆ ಸಂಜಯ್ ಕುಮಾರ್ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್ರಾಜ್, ʻವಿಶ್ವಗುರುವಿನ ಶಿಷ್ಯರು ಆರ್ಆರ್ಆರ್ ಸಿನಿಮಾನ ಬ್ಯಾನ್ ಮಾಡಿ.. ಇಲ್ಲದಿದ್ರೆ ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು. ಎಲ್ ಮಕಾಡೆ ಮಲ್ಕೊಂಡವ್ರೆ ನೋಡ್ರಪ್ಪಾʼ ಅಂತ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ
ದರ್ಶನ್ ಅಭಿಮಾನಿಗಳಿಗೆ ಸಿಗುತ್ತಾ ಗುಡ್ ನ್ಯೂಸ್ ?! ಇಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ !
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ದರ್ಶನ್ ಹಾಗೂ ಉಕಿದ ಆರೋಪಿಗಳ ರೆಗ್ಯುಲರ್ ಬೇಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ ನಟ ದರ್ಶನ್ (Actor...
Read moreDetails