ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ಬಳ್ಳಾರಿ ಜೈಲಿನಲ್ಲಿರುವ A2 ಆರೋಪಿ ದರ್ಶನ್ (Darshan) ರನ್ನ ಡೆವಿಲ್ (Devil) ಸಿನಿಮಾದ ನಿರ್ದೇಶಕ, ನಿರ್ಮಾಪಕರ ಪ್ರಕಾಶ್ ವೀರ್ (Prakash veer) ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ರಿಗಾಗಿ ಎರಡು ಬ್ಯಾಗ್ ಗಳ ತುಂಬಾ ತಂದಿದ್ದ ತಿನಿಸುಗಳನ್ನ ಜೈಲಿನ ಅಧಿಕಾರಿಗಳು ಸಂಪೂರ್ಣ ತಪಾಸಣೆಗೆ ಒಳಪಡಿಸಿ ನಂತರ ಒಳಗೆ ಬಿಟ್ಟಿದ್ದಾರೆ.
ಪರಪ್ಪನ ಅಗ್ರಹಾರದಿಂದ (Parappana agrahara) ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ, ಇಂದು ಮೊದಲ ಬಾರಿಗೆ ಪ್ರಕಾಶ್ ವೀರ್ ಭೇಟಿಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಗೊಂಡಿದ್ದ ಡೆವಿಲ್ ಸಿನಿಮಾ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ದರ್ಶನ್ ಮತ್ತು ಪ್ರಕಾಶ್ ವೀರ್ ಚರ್ಚಿಸಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ, ಈಗಾಗಲೇ ಚಾರ್ಜ್ ಶೀಟ್ (Charge sheet) ಸಲ್ಲಿಕೆಯಾಗಿ, ಜಾಮೀನು ಪ್ರಕ್ರಿಯೆಗಳು ಆರಂಭವಾಗಿದ್ದು, ಶೀಘ್ರದಲ್ಲೇ ದರ್ಶನ್ ಗೆ ಜಾಮೀನು (Bail) ಸಿಗುವ ವಿಶ್ವಾಸದಲ್ಲಿ ಅವರ ಆಪ್ತ ಬಳಗವಿದ್ದು, ಸಿನಿಮಾದ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.