ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ, ಸಾಹಿತಿ ಕುಂ. ವೀರಭದ್ರಪ್ಪ ಸೇರಿ 16 ಮಂದಿಗೆ ಬೆದರಿಕೆ ಪತ್ರವೊಂದು ಬಂದಿದೆ.
‘ಜೈ ಹಿಂದೂ ರಾಷ್ಟ್ರ, ಜೈ ಸಹಿಷ್ಣು’ ಹೆಸರಿನಲ್ಲಿ ಕಿಡಿಗೇಡಿಗಳು ರಾಜ್ಯದ ೧೬ ಗಣ್ಯರುಗೆ ಬೆದರಿಕೆ ಪತ್ರ ಕಳುಹಿಸಿದ್ದಾರೆ.
ಕುಂ. ವೀರಭದ್ರಪ್ಪನವರಿಗೆ ಬೆದರಿಕೆ ಪತ್ರ ಬರುತ್ತಿರುವುದು ಇದು ಮೂರನೇ ಬಾರಿ. ಇತ್ತೀಚೆಗಷ್ಟೇ ಅವರು ಸಮಾರಂಭವೊಂದರಲ್ಲಿ ನಾನು ಹಿಂದೂ ಅಲ್ಲ ಲಿಂಗಾಯತ ಎಂದು ಘೋಷಣೆ ಮಾಡಿದ್ದರು.
ಈ ಹಿಂದೆ ಕೂಡ ರಾಜ್ಯದ ಗಣ್ಯರಿಗೆ ಬೆದರಿಕೆ ಪತ್ರ ಬಂದಿತ್ತು. ಪತ್ರಕರ್ತೆ ಗೌರಿ ಲಂಕೇಶ್, ಕಲುಬುರ್ಗಿ ಅವರ ಹತ್ಯೆ ನಂತರ ವಿಚಾರವಾದಿಗಳಿಗೆ ಸತತವಾಗಿ ಬೆದರಿಕೆ ಕರೆಗಳು ಬರುತ್ತಿವೆ.
ಈಗಾಗಲೇ ಕುಂ.ವೀರಭದ್ರಪ್ಪ ಮುಂತಾದವರು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತಮಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ರಕ್ಷಣೆಯನ್ನೂ ಕೋರಿದ್ದರು. ಪತ್ರದಲ್ಲಿ ನೇರವಾಗಿ ದಾಳಿ ಮಾಡಿ ಪೊಲೀಸರಿಗೆ ಸರೆಂಡರ್ ಆಗುತ್ತೇನೆ ಎಂದು ಆಗಂತುಕ ಬರೆದುಕೊಂಡಿದ್ದಾನೆ.