ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎಲ್.ಒ.ಸಿ (ಲುಕ್ ಔಟ್ ಸರ್ಕ್ಯೂಲರ್ ) ಜಾರಿಯಾಗಿರೋ ಹಿನ್ನಲೆ FRRO (ವಿದೇಶಿಯರ ಪ್ರಾದೇಶಿಕ ನೊಂದಣಿ ಅಧಿಕಾರಿ) ಚೇತನ್ ಸಿಂಗ್ ರಾಥೋರ್ ನೇತೃತ್ವದಲ್ಲಿ ತಪಾಸಣೆ ನಡೆಯಲಿದೆ.
ಪ್ರಜ್ವಲ್ ಆಗಮಿಸ್ತಿರೋದು ಕನ್ಫರ್ಮ್ ಆಗಿರುವ ಹಿನ್ನಲೆ ಚೇತನ್ ಸಿಂಗ್ ರಾಥೋರ್ ರಿಗೆ ಈ ಮಾಹಿತಿ ನೀಡಲಾಗಿದೆ. ಪ್ರಜ್ವಲ್ ಗೆ LOC ಸರ್ವ್ ಆಗಿರೋ ಹಿನ್ನಲೆ ಇಮಿಗ್ರೇಷನ್ ಚೆಕ್ಕಿಂಗ್ ವೇಳೆ ಪ್ರಜ್ವಲ್ ವಶಕ್ಕೆ ಪಡೆಯಲು ಚೇತನ್ ಸಿಂಗ್ ರಾಥೋರ್ ಮುಂದಾಗುತ್ತಾರೆ.
LOC ಸರ್ವ್ ಆಗಿರೋದ್ರಿಂದ ಪಾಸ್ ಪೋರ್ಟ್ ಸ್ವೈಪ್ ಮಾಡ್ತಿದ್ದಂತೆ LOC ನೋಟಿಸ್ ಬೋರ್ಡ್ ನಲ್ಲಿ ಬ್ಲಿಂಕ್ ಆಗತ್ತೆ. ಇಮಿಗ್ರೇಷನ್ ಚೆಕ್ಕಿಂಗ್ ವೇಳೆಯಲ್ಲೆ ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್ ರನ್ನ ವಶಕ್ಕೆ ಪಡೆಯಲಿದ್ದಾರೆ.
ಈ ನಂತರ ಏರ್ಫೊರ್ಟ್ ನಲ್ಲಿ ಪ್ರಜ್ವಲ್ ರನ್ನ ಎಸ್ಐ.ಟಿ ವಶಕ್ಕೆ ಹಸ್ತಾಂತರಿಸೋ ಬಗ್ಗೆ ಎಸ್.ಐ.ಬಿ(Subsidiary Intelligence bureau ) ಗೆ ಮಾಹಿತಿ ನೀಡಲಾಗುತ್ತೆ.