ಮಣಿರತ್ನಂ ನಿರ್ದೇಶನದ ಚೋಳರ ಗತವೈಭವ ಸಾರುವ ಸಿನಿಮಾ ಪೊನ್ನಿಯನ್ ಸೆಲ್ವನ್ ಬಿಡುಗಡೆಯಾದ ಮೊದಲ ದಿನಕ್ಕೆ ದಾಖಲೆ ಗಳಿಕೆ ಕಂಡ ಈ ವರ್ಷದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ.
ರಾಜಮೌಳಿ ನಿರ್ದೇಶನದ RRR ಹಾಗೂ ಕಮಲ್ ಹಾಸನ್ ನಟನೆಯ ವಿಕ್ರಂ ಚಿತ್ರ ನಂತರದ ಸ್ಥಾನದಲ್ಲಿದೆ. ಸಿನಿಮಾ ವಹಿವಾಟು ವಿಶ್ಲೇಷಕರ ಪ್ರಕಾರ ಪೊನ್ನಿಯನ್ ಸೆಲ್ವನ್ ಮೊದಲ ದಿನವೇ ತಮಿಳುನಾಡಿನಲ್ಲಿ 25.8ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿದು ಬಂದಿದೆ.
ಅಜಿತ್ ನಟನೆಯ ವಲಿಮೈ(36.1), ದಳಪತಿ ವಿಜಯ್ ನಟನೆಯ ಬೀಸ್ಟ್(26.4) ಮೊದಲ ಎರಡು ಸ್ಥಾನದಲ್ಲಿವೆ.
ಪೊನ್ನಿಯನ್ ಸೆಲ್ವನ್ ಹಿಂದಿ ಅವತರಣಿಕೆಗೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮೊದಲ ದಿನವೇ 1.7ಕೋಟಿ ರೂಪಾಯಿ ಗಳಿಕೆ ಕಂಡಿದೆ. ಚಿತ್ರಕ್ಕೆ ಭಾರತ ಅಲ್ಲದೆ ಹೊರದೇಶಗಳಲ್ಲಿಯೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರ ವಿಮರ್ಶಕರು ಹೇಳಿದ್ದಾರೆ.