ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟಾರೆ ಆಸ್ತಿಯಲ್ಲಿ 26 ಲಕ್ಷ ರೂ. ಏರಿಕೆಯಾಗಿದೆ. ಆದರೆ ಅದೆಲ್ಲವೂ ಬ್ಯಾಂಕ್ ಡೆಪಾಸಿಟ್ ಆಗಿದ್ದು, ಇದ್ದ ಒಂದೇ ಒಂದು ಭೂಮಿಯನ್ನೂ ದಾನ ಮಾಡಿದ್ದರಿಂದ ಅವರ ಬಳಿ ಈಗ ಸ್ಥಿರಾಸ್ತಿಯೇ ಇಲ್ಲ!
ಹೌದು, ಇತ್ತೀಚೆಗೆ ಪ್ರಧಾನಿ ಕಚೇರಿ ನೀಡಿದ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟಾರೆ ಆಸ್ತಿ ಮೌಲ್ಯ 2.23 ಕೋಟಿ ರೂ. ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 26 ಲಕ್ಷ ರೂ. ಏರಿಕೆಯಾಗಿದೆ. ಆದರೆ ಎಲ್ಲವೂ ಬ್ಯಾಂಕ್ ನಲ್ಲಿ ಇರಿಸಿದ ಠೇವಣಿಯದ್ದಾಗಿದೆ.
ಮೋದಿ ಅವರ ಬಳಿ 1.1 ಕೋಟಿ ರೂ. ಮೌಲ್ಯದ ಒಂದು ಜಮೀನು ಇತ್ತು. ಆದರೆ ಅದನ್ನು ಗಾಂಧಿನಗರದಲ್ಲಿ ದಾನ ಮಾಡಿದ್ದಾರೆ. ಇದರಿಂದ ಅವರ ಬಳಿ ಈಗ ಯಾವುದೇ ಸ್ಥಿರಾಸ್ತಿ ಇಲ್ಲದಂತಾಗಿದೆ.
2021, ಮಾರ್ಚ್ 31ರಂದು ಪ್ರಧಾನಿ ಮೋದಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು , ಇದರ ಪ್ರಕಾರ ಪ್ರಸ್ತುತ ಅವರ ಬಳಿ ಯಾವುದೇ ಸ್ವಂತ ಕಾರು ಅಥವಾ ಮನೆ ಇಲ್ಲ. ಯಾವುದೇ ಬಾಂಡ್ ಹೊಂದಿಲ್ಲ.
ಪ್ರಧಾನಿ ಮೋದಿ ತಮ್ಮ ಹಣವನ್ನು ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡಿದ್ದಾರೆ. ಅಲ್ಲದೇ 4 ಚಿನ್ನದ ಉಂಗುರ ಹೊಂದಿದ್ದು, ಇದರ ಮೌಲ್ಯ 1.73 ಕೋಟಿ ರೂ. ಆಗಿದೆ.