ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ. ನಾನು ಭಾರತದಲ್ಲಿ ಹುಟ್ಟಿದ್ದೇನೆ. ಮೋದಿಯವರ ದಬ್ಬಾಳಿಕೆಯ ನೀತಿಗಳು ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವಷ್ಟು ತೀವ್ರವಾಗಿಲ್ಲ..” ಎಂದು ಟಿಬೆಟ್ನ ದೇಶಭ್ರಷ್ಟ ಅಧ್ಯಕ್ಷ ಪೆನ್ಪಾ ತ್ಸೆರಿಂಗ್ ಆಸ್ಟ್ರೇಲಿಯಾದಲ್ಲಿ ಹೇಳಿದ್ದಾರೆ.
ಕೆಲವು ಘಟನೆಗಳಿಂದಾಗಿ ಭಾರತ (India) ದ ಹೊರಗಿನ ಜನರು ಭಾರತದ ಪರಿಸ್ಥಿತಿಯನ್ನು ವಿಭಿನ್ನವಾಗಿ ಅರ್ಥೈಸುತ್ತಾರೆ, ಆದರೆ ಅದು ವಾಸ್ತವವಲ್ಲ ಎಂದು ದೇಶ ಭ್ರಷ್ಟವಾಗಿರುವ ಟಿಬೆಟಿಯನ್ ಸರ್ಕಾರದ ಅಧ್ಯಕ್ಷ ಪೆನ್ಪಾ ತ್ಸೆರಿಂಗ್ (Penpa Tsering, Tibet President in exile), ಆಸ್ಟ್ರೇಲಿಯಾದಲ್ಲಿ ಹೇಳಿದ್ದಾರೆ.

“ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ. ನಾನು ಭಾರತದಲ್ಲಿ ಹುಟ್ಟಿದ್ದೇನೆ. ಮೋದಿಯವರ ದಬ್ಬಾಳಿಕೆಯ ನೀತಿಗಳು ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವಷ್ಟು ತೀವ್ರವಾಗಿಲ್ಲ… ಅವರು ಮುಸ್ಲಿಮರನ್ನು ಹಿಂದೂಗಳಾಗಿ ಬದಲಾಯಿಸಲು ಪ್ರಯತ್ನಿಸುತ್ತಿಲ್ಲ. ಕೆಲವು ಗೋರಕ್ಷಕರು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅಂತಹ ಕೆಲವು ಸಂದರ್ಭಗಳಲ್ಲಿ ಸರ್ಕಾರವನ್ನು ದೂಷಿಸಲಾಗುತ್ತದೆ. ಭಾರತವು ವಿಶ್ವದ ಅತ್ಯಂತ ಸಹಿಷ್ಣು ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. ತುಂಬಾ ವೈವಿಧ್ಯಮಯ ಸಂಸ್ಕೃತಿ, ಹಲವಾರು ಧರ್ಮಗಳು, ಹಲವಾರು ರೀತಿಯ ಜನರು, “ಭಾರತ ಮತ್ತು ಭಾರತದ ಹಿಂದುತ್ವದ ತುಡಿತ ಬಗ್ಗೆ ಕೇಳಲಾದ ಪ್ರಶ್ನೆಗೆ ಪೆನ್ಪಾ ತ್ಸೆರಿಂಗ್ ಹೇಳಿದರು.

ತೊಂದರೆ ಉಂಟುಮಾಡುವವರು ಎಲ್ಲೆಡೆ ಇದ್ದಾರೆ. ಕೆಲವು ತೊಂದರೆ ಕೊಡುವವರಿಂದ ನೀವು ಇಡೀ ಸಮುದಾಯವನ್ನು ಅಥವಾ ದೇಶವನ್ನು ದೂಷಿಸಲು ಸಾಧ್ಯವಿಲ್ಲ. ಭಾರತವು ಅತ್ಯಂತ ಚೇತೋಹಾರಿ ದೇಶವಾಗಿದೆ ಮತ್ತು ಅದರ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತದೆ” ಎಂದು ಪೆನ್ಪಾ ತ್ಸೆರಿಂಗ್ ಹೇಳಿದರು.