ಖ್ಯಾತ ಕಿರುತೆರೆ ಬೆಂಗಾಲಿ ನಟಿ ಪಲ್ಲವಿ ಡೇ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಮನೆಯಲ್ಲಿ ಪತ್ತೆಯಾಗಿದೆ.
ಕೋಲ್ಕೊತ್ತಾದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಪ್ರಿಯಕರ ಶಾಗ್ನಿಗ್ ಚಕ್ರವರ್ತಿ ಜೊತೆ ವಾಸವಿದ್ದ ಪಲ್ಲವಿ ಸಾವು ಅನುಮಾನಾಸ್ಪದವಾಗಿದ್ದು, ಸಾವು ಆತ್ಮಹತ್ಯೆಯಲ್ಲ ಎಂಬುದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಿಯಕರ ಹೊರ ಹೋಗಿದ್ದ ವೇಳೆ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಿಯಕರ ಸಘ್ನಿಕ್ ಚಕ್ರವರ್ತಿಯನ್ನು ಪೊಲೀಸರು ವಿಚಾರಣೆ ನಡಸಿದ್ದಾರೆ. ವಿಚಾರಣೆ ವೇಳೆ ಪಲ್ಲವಿ ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.