ಪಾಕಿಸ್ತಾನದ ಸೇನಾ ಹೆಲಿಕಾಫ್ಟರ್ ಪತನಗೊಂಡ ಪರಿಣಾಮ ಇಬ್ಬರು ಅಧಿಕಾರಿಗಳು ಸೇರಿದಂತೆ 6 ಯೋಧರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ಉತ್ತರ ಪಾಕಿಸ್ತಾನದ ಬಲೂಚಿಸ್ತಾನದ ಪ್ರದೇಶದ ಹರ್ನೈ ಬಳಿ ಫ್ಲೈಯಿಂಗ್ ಮಿಷನ್ ನಲ್ಲಿ ತೊಡಗಿದ್ದ ಹೆಲಿಕಾಫ್ಟರ್ ಪತನಗೊಂಡಿದ್ದು, ದುರ್ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಹೆಲಿಕಾಫ್ಟರ್ ನಲ್ಲಿದ್ದ ಇಬ್ಬರು ಮೇಜರ್ ಗಳು, ಇಬ್ಬರು ಪೈಲೆಟ್ ಹಾಗೂ ಇಬ್ಬರು ಯೋಧರು ಇದ್ದರು ಎಂದು ಪಾಕಿಸ್ತಾನದ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಮತ್ತೊಂದು ಮಿಲಿಟರಿ ಹೆಲಿಕಾಪ್ಟರ್ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪತನಗೊಂಡಿತು ಮತ್ತು ಅಪಘಾತದಲ್ಲಿ ಆರು ಮಂದಿ ಉನ್ನತ ಸೇನಾ ಕಮಾಂಡರ್ ಮೃತಪಟ್ಟಿದ್ದರು.