ಪಾಕಿಸ್ತಾನದ ಅಣ್ವಸ್ತ್ರ ನೆಲೆಯ (Pakistan nuclear plant) ಕೀಲಿಕೈ ಅಮೇರಿಕಾದ (America) ಬಳಿಯಿದೆ ಎಂಬ ಅರ್ಥದಲ್ಲಿ ಅಮೇರಿಕಾದ ಗುಪ್ತಚರ ಸಂಸ್ಥೆಯ ಸಿಐಎ ಮಾಜಿ ಹಿರಿಯ ಅಧಿಕಾರಿ ಜಾನ್ ಕಿರಿಯಾಕೌ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ನೆಡಿಸಿ ಪಾಕಿಸ್ತಾನದ ಪರಮಾಣು ಸ್ಥಾವರವಾದ ಕಿರಾನಾ ಹಿಲ್ ಮೇಲೆ ದಾಳಿ ಮಾಡಿತ್ತು, ಆಗ ಅದಕ್ಕೆ ಹಾನಿಯಾಗಿತ್ತು ಎಂಬ ಚರ್ಚೆ ಜೋರಾಗಿತ್ತು.

ಈ ದಾಳಿಯ ಬಳಿಕ ಭಾರತ ಮತ್ತು ಪಾಕ್ ನಡುವೆ ಅಮೇರಿಕಾ ಸಂಧಾನ ಮಾಡಿ ಕದನ ವಿರಾಮಕ್ಕೆ ಒಪ್ಪುವಂತೆ ಮಾಡಿತ್ತು ಎಂದು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದರು. ಈ ನಡುವೆ ಅಮೇರಿಕಾದ ಮಾಜಿ ಅಧಿಕಾರಿಯೇ ಈ ರೀತಿ ಹೇಳಿಕೆ ನೀಡಿದ್ದು ಕುತೂಹಲಕಾರಿಯಾಗಿದೆ.

ಇದೇ ಜಾನ್ ಕಿರಿಯಾಕೌ ಎರಡು ದಶಕಗಳ ಹಿಂದೆ ಉಗ್ರ ನಿರ್ಗಹ ಕಾರ್ಯದಲ್ಲಿ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ರು.ಕೆಲ ತಿಂಗಳುಗಳಿಂದ ನೂರ್ ಖಾನ್ ಏರ್ ಬೇಸ್ ಅಮೇರಿಕಾದ ನಿಯಂತ್ರಣದಲ್ಲಿದೆ.ಅಲ್ಲಿಗೆ ಪಾಕ್ ಹಿರಿಯ ಅಧಿಕಾರಿಗಳಿಗೂ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪಾಕ್ ಭದ್ರತಾ ತಜ್ಞ ಇಮ್ತಿಯಾಜ್ ಗುಲ್ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.