ADVERTISEMENT
  • Home
  • About Us
  • ಕರ್ನಾಟಕ
Saturday, May 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕನ್ನಡವನ್ನು ಬದುಕಿನ ಭಾಷೆ ಮಾಡಿಕೊಳ್ಳುವುದೇ ನಮ್ಮ ಗುರಿ:ಡಿಸಿಎಂ ಡಿ.ಕೆ. ಶಿವಕುಮಾರ್

Any Mind by Any Mind
November 1, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು:”ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಈ ನೆಲಕ್ಕೆ ಕೃತಜ್ಞತೆ ಸಲ್ಲಿಸಿ, ಕನ್ನಡದ ಕೀರ್ತಿ ಪತಾಕೆಯನ್ನು ನಾವೆಲ್ಲರೂ ಹಾರಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡು, 51ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕರ್ನಾಟಕವೇ ನಮ್ಮ ಸ್ವರ್ಗ, ಕನ್ನಡವೇ ನಮ್ಮ ದೇವ ಭಾಷೆ, ತುಂಗ, ಭದ್ರೆ, ಕಾವೇರಿ, ಕೃಷ್ಣ ನದಿಯೇ ನಮಗೆ ಪುಣ್ಯ ತೀರ್ಥ ಎಂದು ಭಾವಿಸಿದ್ದೇವೆ” ಎಂದು ತಿಳಿಸಿದರು.,

“ರಾಜ್ಯ ಸರ್ಕಾರ ಹಾಗೂ ವೈಯಕ್ತಿಕವಾಗಿ ರಾಜ್ಯದ ಜನರು ಹಾಗೂ ಎಲ್ಲಾ ಕನ್ನಡಿಗರಿಗೆ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತೇನೆ” ಎಂದರು.

“ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕೆಲ್ಲ ಜ್ಯೋತಿಯಾಗು ಎಂದು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರು ನಮಗೆ ನೀಡಿರುವ ಮಾರ್ಗದರ್ಶನ.ಕನ್ನಡ ನಮ್ಮ ಹೆಮ್ಮೆ. ಕನ್ನಡಮ್ಮನ ದೊಡ್ಡ ಹಬ್ಬ ಇದು.ಬದುಕು ನೀಡಿದ ಕರ್ಮ ಭೂಮಿಗೆ ನಾವೆಲ್ಲರೂ ಧನ್ಯವಾದ ಅರ್ಪಿಸಬೇಕು” ಎಂದು ತಿಳಿಸಿದರು.

“ಬದುಕಿನ ಪ್ರತಿ ಕ್ಷಣ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು.ಈ ವರ್ಷ ಬೆಂಗಳೂರು ನಗರದಲ್ಲಿ ಎಲ್ಲಾ ಖಾಸಗಿ ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೇವೆ” ಎಂದು ಹೇಳಿದರು.

“ನಮ್ಮ ನಾಡಗೀತೆ ಬಹಳ ವಿಶೇಷವಾಗಿದೆ. ಬೇರೆ ರಾಜ್ಯಗಳಲ್ಲಿ ನಾಡ ಗೀತೆ ಹಾಗೂ ನಾಡ ಧ್ವಜವಿಲ್ಲ. ಕುವೆಂಪು ಅವರು ರಚಿಸಿದ ಗೀತೆಯನ್ನು ನಾವು ನಾಡಗೀತೆ ಎಂದು ಹಾಡುತ್ತಿದ್ದೇವೆ.ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ.ಇದೇ ನಮ್ಮ ವಿಶೇಷತೆ. ಇದನ್ನು ಗಮನಿಸಿ ವಿಶ್ವದ ಎಲ್ಲಾ ಭಾಗದಿಂದ ಜನ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

“ಕನ್ನಡವೇ ನಮ್ಮ ಮನಸ್ಸಿನ ಭಾಷೆ. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ನಾವು ಉಳಿಸಿಕೊಂಡು ಹೋಗಬೇಕು.ಅನೇಕ ಕನ್ನಡಿಗರು ವಿಶ್ವದ ಮೂಲೆ ಮೂಲೆಯಲ್ಲಿ ಕನ್ನಡ ಹಾಗೂ ಕನ್ನಡದ ಸಂಸ್ಕೃತಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ.ಭಾರತ ಮಾತ್ರವಲ್ಲ, ಇಡೀ ವಿಶ್ವದ ಎಲ್ಲಾ ಕನ್ನಡಿಗರು ಒಂದಾಗಿದ್ದಾರೆ.ಕನ್ನಡದ ಅಭಿವೃದ್ಧಿ ಮಿಂಚಿನ ಓಟದಲ್ಲಿ ಸಾಗುತ್ತಿದೆ” ಎಂದರು.

“ನೀವೆಲ್ಲರೂ ದೇಶದ ಆಸ್ತಿ. ಇಡೀ ವಿಶ್ವ ನಿಮ್ಮನ್ನು ನೋಡುತ್ತಿದೆ.ಹೀಗಾಗಿ ಭಾಷೆ, ಸಂಸ್ಕೃತಿಯನ್ನು ಬಹಳ ಗೌರವದಿಂದ ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.

Tags: "Kannada is the language of our mind.CM SiddaramaiahCongress PartyDCM DK Shivakumarlanguage of lifeMadhu BangarappaMany KannadigasOur goal is to make Kannadasong composed by Kuvempu
Previous Post

ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಿ:ರಾಜ್ಯದ ಜನರಿಗೆ ಸಿಎಂ ಕರೆ

Next Post

ಫ್ರೀ ಬಸ್‌ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ‌ ಡಿಕೆ ಶಿವಕುಮಾರ್

Related Posts

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್
Top Story

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

by ಪ್ರತಿಧ್ವನಿ
May 24, 2025
0

https://youtu.be/HvjSUDPcbes ಬೆಂಗಳೂರಿನಲ್ಲಿ ನೆಡೆದ ದುರ್ಘಟನೆ ನಡೆದಿದೆ ಇದೇ ತಿಂಗಳು ಮೇ 21ರಂದು ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಗಳಾದ ಶಶಾಂಕ್ ದಂಪತಿ ಗಳುಹಾಗೂ ಜೆಪ್ಟೋ ಎಂಬಾಲ್ಲಿ ಡೆಲಿವರಿ ಬಾಯ್...

Read moreDetails
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

May 24, 2025

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

May 24, 2025
Next Post

ಫ್ರೀ ಬಸ್‌ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ‌ ಡಿಕೆ ಶಿವಕುಮಾರ್

Recent News

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್
Top Story

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

by ಪ್ರತಿಧ್ವನಿ
May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 
Top Story

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

by Chetan
May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 
Top Story

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

by Chetan
May 24, 2025
Top Story

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

by ಪ್ರತಿಧ್ವನಿ
May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 
Top Story

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

by Chetan
May 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

May 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!