ಕಳೆದ ವರ್ಷ ಕರೋನ ಮಹಾಮಾರಿ ರಾಜ್ಯಾದ್ಯಂತ ಹರಡಿರುವ ಕಾರಣ ಬಹುತೇಕ ರಾಜ್ಯದ ಎಲ್ಲಾ ಶಾಲೆಗಳು ಮುಚ್ಚಿದವು. ಕಾಲಕ್ರಮೇಣ ಕಡಿಮೆಯಾಗುತ್ತಿದಂತೆ ಕೆಲವು ನಿರ್ಬಂಧಗಳೊಂದಿಗೆ ಶಾಲೆಯನ್ನು ತೆರೆಯಿತ್ತಾದರು ಅಷ್ಟರಲ್ಲೆ ಕರೋನ ಎರಡನೇ ಅಲೆ ಅಪ್ಪಳಿಸಿದ ಕಾರಣ ಮತ್ತೆ ಶಾಲೆಗಳನ್ನು ಮುಚ್ಚಲಾಯಿತು. ಕಳೆದ ಒಂದು ವರ್ಷದಿಂದ ಸರಿಯಾಗಿ ಪಾಠ ಕೇಳದ ಮಕ್ಕಳ ಶೈಕ್ಷಣಿಕವಾಗಿ ಹಿಂದುಳಿಯಬಾರದೆಂದು ಈಗ ಶಿಕ್ಷಣ ಇಲಾಖೆ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಬದಲು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಪ್ರಕಟಿಸಿದೆ.
ಸರ್ಕಾರದ ಅಂಗವಾಗಿರುವ ದೂರದರ್ಶನ ಚಂದನ ವಾಹಿನಿಯಲ್ಲಿ “ಸಂವೇದಾ” ಕಾರ್ಯಕ್ರಮದ ಮೂಲಕ 1662 ವಿಡಿಯೋ ಪಾಠಗಳನ್ನು ಬೋಧನೆ ನಡೆಯಲಿದೆ. ಈಗಾಗಲೇ ರೇಡಿಯೋ ಪಾಠ ಎಂದು ಪ್ರಸಿದ್ಧವಾಗಿರು ಎಫ್ಎಂ ನಲ್ಲಿ ಆಡಿಯೋ ಪಾಠಗಳ ಪ್ರಸಾರ ನಡೆಯಲಿದೆ. ಕೇಂದ್ರ ಸರ್ಕಾರದ ದೀಕ್ಷಾ ಆಪ್ ನಲ್ಲಿ 1 ರಿಂದ 10 ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದಂತೆ 22 ಸಾವಿರಕ್ಕೂ ಹೆಚ್ಚು ಪಠ್ಯಗಳನ್ನು ಅಪ್ ಲೋಡ್ ಮಾಡಲಾಗಿದೆ ಎನ್ನಲಾಗಿದೆ.
ದೂರದರ್ಶನ ಮತ್ತು ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇದಕ್ಕೆ ಶಿಕ್ಷಕರ ಜೊತೆ ಮಕ್ಕಳ ಪೋಷಕರ ಸಹಾಯ ಅತ್ಯಗತ್ಯವಾಗಿದ್ದು ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದಿದೆ.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ನೆಪ ಹೇಳಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಬಂದ್ ಮಾಡುವಂತಿಲ್ಲ. ಒಂದು ವೇಳೆ ಈ ಕುರಿತು ದೂರು ಬಂದರೆ, ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿ ಈ ಕೆಳಕಂಡಂತಿದೆ.