ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಯುವ ತಂಬಾಕು ಸಮೀಕ್ಷೆ (GYTS)ಯಲ್ಲಿ ಉತ್ತರ ಪ್ರದೇಶದಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಯಾವುದಾದರು ಒಂದು ರೂಪದಲ್ಲಿ ತಂಬಾಕು ಸೇವಿಸುತ್ತಿರುವುದು ತಿಳಿದು ಬಂದಿದೆ.
ಶೇ. 37.4 ಮಕ್ಕಳು ತಮ್ಮ ಸ್ವಂತ ಮನೆಯಲ್ಲೇ ಧೂಮಪಾನ ಮಾಡುತ್ತಾರೆ. ಶೇ. 19.8 ಮಕ್ಕಳು ಬೇರೆ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಾರೆ ಎಂದು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದು ಬಂದಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಜನರ ಪ್ರಕಾರ ಶೇ.13.5 ವಿದ್ಯಾರ್ಥಿಗಳು ಶಾಲೆಯಲ್ಲೇ ಧೂಮಪಾನ ಮಾಡುತ್ತಾರೆ. ಶೇ. 10.8 ಬಾಲಕರು ಸಾರ್ವಜನಿಕ ಸ್ಥಳಗಳಲ್ಲಿ, ಶೇ. 8.9 ಬಾಲಕರು ಕಾರ್ಯಕ್ರಮಗಳಲ್ಲಿ, ಶೇ. 9.7 ವಿದ್ಯಾರ್ಥಿಗಳು ಸಾಮಾನ್ಯ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಾರೆ ಎಂದು ವರದಿ ತಿಳಿಸಿದೆ.

ಜಾಗತಿಕ ಯುವ ತಂಬಾಕು ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ 23% ವಿದ್ಯಾರ್ಥಿಗಳು, 22% ಹುಡುಗರು, 24% ಹುಡುಗಿಯರು ಒಂದಲ್ಲ ಒಂದು ರೀತಿಯಲ್ಲಿ ತಂಬಾಕು ಸೇವನೆ ಮಾಡುತ್ತಿರುವುದು ವರದಿ ಮೂಲಕ ಬಹಿರಂಗವಾಗಿದೆ.
ಇದು, 13-15 ವರ್ಷ ವಯೋಮಿತಿಯ ಮಕ್ಕಳ ಶಾಲಾ ಆಧಾರಿತ GYTS ಸಮೀಕ್ಷೆಯಾಗಿದೆ. ಮೊದಲೇ ದೇಶಾದ್ಯಂತ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶಕ್ಕೆ ಇದೀಗ ಕುಖ್ಯಾತಿಯಲ್ಲಿ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.