ಒಂದೇ ಇನ್ನಿಂಗ್ಸ್ನಲ್ಲಿ ಬರೋಬ್ಬರಿ ಹತ್ತು ವಿಕೆಟ್ಗಳನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದ ಮಾಜಿ ಆಟಗಾರ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಧನೆಗೆ ಇದೀಗ 25 ವರ್ಷಗಳ ಸಂಭ್ರಮ.
28 ವರ್ಷಗಳ ಹಿಂದೆ, ಇದೇ ದಿನ(ಫೆಬ್ರವರಿ 7, 1999) ಅನಿಲ್ ಕುಂಬ್ಳೆ ಟೆಸ್ಟ್ ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. ನವದೆಹಲಿಯ ಫಿರೋಜ್ ಶಾ ಕೋಟ್ಲಾ(ಇಂದಿನ ಅರುಣ್ ಜೇಟ್ಲಿ ಸ್ಟೇಡಿಯಂ) ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ 2 ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ನಲ್ಲಿ ಕುಂಬ್ಳೆ ಈ ಸಾಧನೆ ಮಾಡಿದರು. ಕುಂಬ್ಳೆ ಅವರ ಈ ಸಾಧನೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂದಿಗೂ ಅವಿಸ್ಮರಣೀಯ ಹಾಗೂ ಐತಿಹಾಸಿಕ ದಿನವಾಗಿದೆ.
ಕುಂಬ್ಳೆ ಅವರ ಅದ್ಭುತ ಬೌಲಿಂಗ್ನಿಂದ ಭಾರತ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅನಿಲ್ ಕುಂಬ್ಳೆ ಅವರಿಗೂ ಮುನ್ನ ಜುಲೈ 1956ರಲ್ಲಿ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ಗಳನ್ನು ಪಡೆದ ಇಂಗ್ಲೆಂಡ್ನ ಜಿಮ್ ಲೇಕರ್ ನಂತರ ಕುಂಬ್ಳೆ ಹೆಗ್ಗುರುತನ್ನು ತಲುಪಿದ ಎರಡನೇ ಬೌಲರ್ ಎನಿಸಿಕೊಂಡರು.
#TestCricket #TeamIndia #Pakistan #AnilKumble #Karnataka






