ಮೂವರು ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರಿ ತಾಲ್ಲೂಕಿನ ಹೊಳೆಬೀದಿಯಲ್ಲಿ ನಡೆದಿದೆ.
ಉಸ್ನಾ ಕೌಸರ್(30), ಮಕ್ಕಳಾದ ಹ್ಯಾರಿಸ್ (7), ಅಲೀಸಾ (4), ಅನಮ್ ಫಾತಿಮಾ (2) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಉಸ್ಮಾ ಪತಿ ಅಖಿಲ್ ಅಹ್ಮದ್ ದಂಪತಿಗಳ ನಡುವೆ ಏರ್ಪಟ್ಟಿದ ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಉಸ್ನಾ ಕೌಸರ್ ಮೂವರು ಮಕ್ಕಳಿಗೆ ವಿಷ ಉಣಿಸಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.