ನವದೆಹಲಿ:ಬಿಹಾರದಲ್ಲಿ ತೈಲ ಟ್ಯಾಂಕರ್ನಲ್ಲಿ ಮದ್ಯ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಹಿಂದೂಸ್ತಾನ್ ಪೆಟ್ರೋಲಿಯಂ ಟ್ಯಾಂಕರ್ ನಲ್ಲಿ ಸುಮಾರು 200 ಬಿಯರ್ ಕ್ರೇಟ್ ಗಳು ಪತ್ತೆಯಾಗಿದ್ದು, ಅಬಕಾರಿ ಪೊಲೀಸ್ ಠಾಣೆಗೆ ತರಲಾಗಿದೆ.
ಕಳ್ಳಸಾಗಾಣಿಕೆದಾರರು ಪರಾರಿಯಾದ ಸಂದರ್ಭದಲ್ಲಿ ನಾಗಾಲ್ಯಾಂಡ್ ನೋಂದಣಿಯ ಟ್ಯಾಂಕರ್ ಅನ್ನು ಮುಜಾಫರ್ಪುರದಿಂದ ವಶಪಡಿಸಿಕೊಳ್ಳಲಾಗಿದೆ.
ಮದ್ಯ ಸಾಗಣೆ ಕುರಿತು ಅಬಕಾರಿ ಇಲಾಖೆಗೆ ಸುಳಿವು ಸಿಕ್ಕಿದ್ದು, ಬಳಿಕ ಕಳ್ಳಸಾಗಣೆದಾರರನ್ನು ಬಂಧಿಸಲು ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ರಸ್ತೆ ತಡೆ ನಡೆಸಿದಾಗ ಇದನ್ನು ಕಂಡ ಕಳ್ಳಸಾಗಾಣಿಕೆದಾರರು ಟ್ಯಾಂಕರ್ ಅನ್ನು ರಾಷ್ಟ್ರೀಯ ಹೆದ್ದಾರಿ ಕಡೆಗೆ ತಿರುಗಿಸಿದರು. ಹಿಂಬಾಲಿಸಿದ ನಂತರ ಚಾಲಕ ಮತ್ತು ಮದ್ಯದ ವ್ಯಾಪಾರಿ ಟ್ಯಾಂಕರ್ ಅನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಸಹಾಯಕ ಅಬಕಾರಿ ಆಯುಕ್ತ ವಿಜಯ್ ಶೇಖರ್ ದುಬೆ ತಿಳಿಸಿದ್ದಾರೆ.
कल मुजफ्फरपुर में एक टैंकर के अंदर से निकला अवैध शराब का इतना बड़ा खेप
— Thakur Divya Prakash (@Divyaprakas8) October 23, 2024
कब शराबबंदी को फेल मानेंगे नीतीश कुमार?#Muzaffarpur #MuzaffarpurAsks #Bihar #HoochTragedy pic.twitter.com/gRqjyOwaFD
ಮದ್ಯವನ್ನು ಅಕ್ರಮವಾಗಿ ಸಾಗಿಸಿದ ಸ್ಥಳೀಯ ವ್ಯಾಪಾರಿಯನ್ನು ಗುರುತಿಸಲಾಗುತ್ತಿದ್ದು, ಆತನನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.