ಉಕ್ರೇನ್ ನಲ್ಲಿ ಮತ್ತಷ್ಟು ಸೇನಾ ತುಕಡಿಗಳನ್ನು ರವಾನೆ ಮಾಡಲಾಗುವುದು ಎಂದು ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಣು ಬಳಕೆ ಎಚ್ಚರಿಕೆ ಸುಳ್ಳಲ್ಲ ಎಂದು ಗುಡುಗಿದ್ದಾರೆ.
ದೂರದರ್ಶನದಲ್ಲಿ ನೇರಪ್ರಸಾರದಲ್ಲಿ ಭಾಷಣ ಮಾಡಿದ ಪುಟಿನ್, ಪಶ್ಚಿಮ ರಾಷ್ಟ್ರಗಳಿಗೆ ಉಕ್ರೇನ್ ನಲ್ಲಿ ಶಾಂತಿ ಬೇಕಾಗಿಲ್ಲ ಎಂದು ಅನಿಸುತ್ತದೆ. ಆದ್ದರಿಂದ ನಾವು ಉಕ್ರೇನ್ ನಿಗೆ ಮತ್ತಷ್ಟು ಸೇನೆ ಕಳುಹಿಸಲಿದ್ದೇವೆ ಎಂದರು.
ಉಕ್ರೇನ್ ಸೈನಿಕರು ತಿರುಗೇಟು ನೀಡಿದ್ದು ಇತ್ತೀಚೆಗೆ ಪ್ರಮುಖ ನಗರವೊಂದನ್ನು ಮರುವಶ ಮಾಡಿಕೊಂಡಿದ್ದರು. ಅಲ್ಲದೇ ಹಲವಾರು ರಷ್ಯಾ ಸೈನಿಕರು ಓಡಿ ಹೋಗಿದ್ದರು ಎಂದು ವರದಿಯಾಗಿತ್ತು.
ರಷ್ಯಾ ಇದೀಗ ಡೊನೆಸ್ಟೆಕ್ ಪ್ರದೇಶದಲ್ಲಿ ಶೇ.60ರಷ್ಟು ಭಾಗ ವಶಪಡಿಸಿಕೊಂಡಿದೆ. ಲುಹಾನ್ ಸ್ಕ್ ಪ್ರದೇಶವನ್ನು ಜುಲೈನಲ್ಲಿ ವಶಪಡಿಸಿಕೊಂಡ ನಂತರ ಪಕ್ಕದ ಡೊನೆಸೈಕ್ ವಶಪಡಿಸಿಕೊಳ್ಳಲು ಹರಸಾಹಸಪಡುತ್ತಿದೆ.
ಈ ಘಟನೆ ಬೆನ್ನಲ್ಲೇ ವ್ಲಾದಿಮಿರ್ ಮತ್ತೊಂದು ಬಾಂಬ್ ಸಿಡಿಸಿದ್ದು, ಉಕ್ರೇನ್ ಗೆ ಮತ್ತಷ್ಟು ಸೇನೆ ರವಾನಿಸುತ್ತೇವೆ. ಆದರೆ ಇದು ಸುಮ್ಮನೆ ಹೆದರಿಸಲು ಸುಳ್ಳು ಹೇಳುತ್ತಿಲ್ಲ ತಿಳಿಸಿದ್ದಾರೆ.