9 ವರ್ಷಗಳ ಕಾಲ ಕಷ್ಟಪಟ್ಟು ಕಟ್ಟಿದ ನೋಯ್ಡಾದ ಅವಳಿ ಕಟ್ಟಡ 9 ಸೆಕೆಂಡ್ ಗಳಲ್ಲಿ ಧರೆಗುರುಳಿದೆ. ಭಾರತೀಯ ಇತಿಹಾಸದಲ್ಲೇ ಮೊದಲ ಬಾರಿ ಬಹುಮಹಡಿ ಕಟ್ಟಡವನ್ನು ತಂತ್ರಜ್ಞಾನ ಮೂಲಕ ಕೆಡವಲಾಯಿತು.
ನಿಯಮ ಬಾಹಿರವಾಗಿ ಕಟ್ಟಿದ್ದಕ್ಕಾಗಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ಐತಿಹಾಸಿಕ ಸುಮಾರು 331 ಅಡಿ ಎತ್ತರದ ಅವಳಿ ಕಟ್ಟಡವನ್ನು ನೆಲಕ್ಕುರುಳಿಸಲಾಯಿತು.
ಸೂಪರ್ ಟೆಕ್ ಅವಳಿ ಕಟ್ಟಡದಲ್ಲಿ 39 ಅಂತಸ್ತಿನ ಅಪೆಕ್ಸ್ ಮತ್ತು 29 ಅಂತಸ್ತಿನ ಸಿಯಾನೆ ಎಂಬ ಹೆಸರಿನ ಎರಡು ಕಟ್ಟಡಗಳಿದ್ದು, 9 ಮೀಟರ್ ಅಂತರ ಹೊಂದಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಇಲ್ಲಿ ಯಾರಿಗೂ ವಸತಿ ನೀಡಲಾಗಿಲ್ಲ. ಆದರೂ ಇಲ್ಲಿ ಕಾರ್ಮಿಕರು ಸೇರಿದಂತೆ ಸುಮಾರು 7೦೦೦ ಜನರು ವಾಸಿಸುತ್ತಿದ್ದರು.
ಈ ಕಟ್ಟಡ 40 ಅಂತಸ್ತುಗಳನ್ನು ಹೊಂದಿದ್ದು ಮೇಲಿನ ಕೆಲವು ಅಂತಸ್ತುಗಳನ್ನು ಕಾರ್ಮಿಕರನ್ನು ಬಳಸಿ ಕೆಡವಲಾಗಿದೆ. ಆಗಸ್ಟ್ 28 ಭಾನುವಾರ ಬೆಳಿಗ್ಗೆ 7 ಗಂಟೆಯ ಒಳಗಾಗಿ ಇಲ್ಲಿ ವಾಸವಾಗಿರುವ ಪ್ರತಿಯೊಬ್ಬರು ಜಾಗ ತೆರವುಗೊಳಿಸಲು ಸೂಚಿಸಲಾಗಿತ್ತು.
ಭಾರೀ ಚರ್ಚೆಗೀಡಾದ ಸೂಪರ್ ಟೆಕ್ ಕಟ್ಟಡ ಧ್ವಂಸಗೊಳಿಸಲು 3700 ಕೆಜಿ ಸ್ಫೋಟಕ ಬಳಸಲಾಗುತ್ತಿದೆ. ಸ್ಫೋಟದ ವೇಳೆ ಸುಮಾರು 20 ಸಾವಿರ ಸಂಪರ್ಕಗಳು ಮಾಡಲಾಗಿತ್ತು.
ಕಟ್ಟಡ ನೆಲಕ್ಕುರುಳಿಸಲು ಅಮೆರಿಕ ಮೂಲದ ವಿಬ್ರೊಟೆಕ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ಸ್ಫೋಟ ಪ್ರತಿ ಸೆಕೆಂಡ್ ಗೆ 22ರಿಂದ 24 ಮಿ.ಮೀ. ಆಗಿರುತ್ತದೆ.