Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಎನ್‌ಎಫ್‌ಟಿಯಿಂದ ಕಿಚ್ಚನ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್: ಕಿಚ್ಚ ವರ್ಸ್ ಲಾಂಚ್

ಪ್ರತಿಧ್ವನಿ

ಪ್ರತಿಧ್ವನಿ

July 18, 2022
Share on FacebookShare on Twitter

ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ ಹಾಗೂ ಚಿತ್ರದ ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸೂಪರ್ ಡೂಪರ್ ಸರ್ಪ್ರೈಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದ್ದು. ಎನ್ ಎಫ್ ಟಿ ಸಂಸ್ಥೆ ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣವನ್ನು ಪ್ರಸ್ತುತ ಪಡಿಸಲಿದೆ.

ಹೆಚ್ಚು ಓದಿದ ಸ್ಟೋರಿಗಳು

ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ನಟನ ಪುತ್ರ ಸಿದ್ಧಾಂತ್‌ ಕಪೂರ್‌ ಗೆ ಸಮನ್ಸ್

ಚಾಲೆಂಜಿಂಗ್‌ ಸ್ಟಾರ್‌ ವಿರುದ್ದ ಸಮರ ಸಾರಿದ ಅಪ್ಪು ಫ್ಯಾನ್ಸ್

ತೆರೆಗೆ ಬರಲು ಸಜ್ಜಾದ ವಿಭಿನ್ನ ಕಥೆಯ ವಿಕಿಪೀಡಿಯಾ

ಈ ಕುರಿತು ಎನ್ ಎಫ್ ಟಿ ಸಂಸ್ಥೆ ಕಿಚ್ಚ ಸುದೀಪ ಒಳಗೊಂಡಂತೆ ವಿಕ್ರಾಂತ್ ರೋಣ ತಂಡದೊಂದಿಗೆ ‘ಕಿಚ್ಚ ವರ್ಸ್ʼ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಭಾನುವಾರ ‘ಕಿಚ್ಚ ವರ್ಸ್ʼ ಬಗ್ಗೆ ಎನ್ ಎಫ್ ಟಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರತಂಡದೊಂದಿಗೆ ಲಾಂಚ್ ಮಾಡಿದೆ. ಎನ್ ಎಫ್ ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್ ಜಗತ್ತು ಕಿಚ್ಚನಿಗೂ ಸಖತ್ ಸರ್ಪ್ರೈಸ್ ಆಗಿದ್ದು ಮೊದಲ ಬಾರಿ ಇದರ ಬಗ್ಗೆ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. ಆದ್ರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾನೇ ಅಧ್ಬುತ ಕೆಲಸವನ್ನು ಈ ತಂಡ ಮಾಡಿದೆ ಖಂಡಿತ ಎಲ್ಲರಿಗೂ ಇಂತಹದ್ದೇ ಒಂದು ಒಳ್ಳೆಯ ಅನುಭವವನ್ನು ಇದು ನೀಡಲಿದೆ ಎಂಬ ಭರವಸೆ ಇದೆ ಎಂದು ನಟ ಕಿಚ್ಚ ಸುದೀಪ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕಿಚ್ಚ ವರ್ಸ್ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ನಿಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಎನ್ ಎಫ್ ಟಿ ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ತಿಳಿಸಿದ್ದಾರೆ.

ಜುಲೈ 17ರಿಂದ ಎನ್ ಎಫ್ ಟಿ ಸ್ಕೆಚ್ ಕಾಂಪಿಟೇಶನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅಧ್ಬುತ ಸ್ಕೆಚ್ ಮಾಡಿದವರಿಗೆ ಎನ್ ಎಫ್ ಟಿ ಮೆಂಬರ್ ಶಿಪ್ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ. ಹೀಗೆ ಎನ್ ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್ ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.

ಜಗತ್ತಿನಲ್ಲೇ ಮೊದಲ ಬಾರಿ ವಿಕ್ರಾಂತ್ ರೋಣ ಸಿನಿಮಾವನ್ನು ಎನ್ ಎಫ್ ಟಿ ಪ್ರೀಮಿಯರ್ ಶೋ ನಡೆಸುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್ ಶೋ ನಡೆಸುತ್ತಿರೋದು ಇದೇ ಮೊದಲು. ಇದು ವಿಕ್ರಾಂತ್ ರೋಣ ಸಿನಿಮಾದ ಹೆಗ್ಗಳಿಕೆ. ಜುಲೈ 27ಕ್ಕೆ ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಎನ್ ಎಫ್ ಟಿ ಮೆಂಬರ್ ಶಿಪ್ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಓ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

RS 500
RS 1500

SCAN HERE

don't miss it !

ಫಾಜಿಲ್‌ ಹತ್ಯೆಗೈದ 6 ಮಂದಿ ಅರೆಸ್ಟ್:‌  ಹತ್ಯೆಯ ವಿವರ ಬಹಿರಂಗ
ಕರ್ನಾಟಕ

ಫಾಜಿಲ್‌ ಹತ್ಯೆಗೈದ 6 ಮಂದಿ ಅರೆಸ್ಟ್:‌  ಹತ್ಯೆಯ ವಿವರ ಬಹಿರಂಗ

by ಪ್ರತಿಧ್ವನಿ
August 2, 2022
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!
ಕರ್ನಾಟಕ

ಇಂದು, ನಾಳೆ ರಾಜ್ಯಾದ್ಯಂತ ಭಾರೀ ಮಳೆ : ಹವಾಮಾನ ಇಲಾಖೆ

by ಪ್ರತಿಧ್ವನಿ
August 5, 2022
ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌
ದೇಶ

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌

by ಪ್ರತಿಧ್ವನಿ
August 8, 2022
ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ : ಆರಗ ಜ್ಞಾನೇಂದ್ರ
ಕರ್ನಾಟಕ

108 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ!

by ಪ್ರತಿಧ್ವನಿ
August 7, 2022
ಬಿ.ಸಿ.ನಾಗೇಶ್ ಮಂತ್ರಿ ಆಗಲು ನಾಲಾಯಕ್ : ಸಿದ್ದರಾಮಯ್ಯ
ಕರ್ನಾಟಕ

ಅಮೃತ ಮಹೋತ್ಸವಕ್ಕೆ ಖರ್ಗೆ, ಮುನಿಯಪ್ಪ ಗೈರು : ಸಿದ್ದರಾಮಯ್ಯ ಸಮರ್ಥನೆ!

by ಪ್ರತಿಧ್ವನಿ
August 3, 2022
Next Post
ಆಹಾರ ಪದಾರ್ಥಗಳ ಮೇಲಿನ ಹೊಸ GST ನೀತಿ ವಿರೋಧಿಸಿ ರಾಹುಲ್‌ ಗಾಂಧಿ, ವರುಣ್ ಗಾಂಧಿ ವಾಗ್ದಾಳಿ!

ಆಹಾರ ಪದಾರ್ಥಗಳ ಮೇಲಿನ ಹೊಸ GST ನೀತಿ ವಿರೋಧಿಸಿ ರಾಹುಲ್‌ ಗಾಂಧಿ, ವರುಣ್ ಗಾಂಧಿ ವಾಗ್ದಾಳಿ!

ಪಂಜಾಬ್; ರಾಷ್ಟ್ರಪತಿ ಚುನಾವಣೆಯನ್ನು ಬಹಿಷ್ಕರಿಸಿದ ಶಾಸಕ ಮನ್‌ಪ್ರೀತ್‌ ಸಿಂಗ್ ಅಯ್ಯಾಲಿ

ಪಂಜಾಬ್; ರಾಷ್ಟ್ರಪತಿ ಚುನಾವಣೆಯನ್ನು ಬಹಿಷ್ಕರಿಸಿದ ಶಾಸಕ ಮನ್‌ಪ್ರೀತ್‌ ಸಿಂಗ್ ಅಯ್ಯಾಲಿ

ʼಮುಸ್ಲಿಮರ ಛದ್ಮವೇಷ ಧರಿಸುವ ಸಂಘಪರಿವಾರʼ: ಲುಲು ಮಾಲ್‌ ನಮಾಝ್‌ ಪ್ರಕರಣ ಮತ್ತು “ಆರ್‌ಎಸ್‌ಎಸ್‌; ಆಳ-ಅಗಲ”

ʼಮುಸ್ಲಿಮರ ಛದ್ಮವೇಷ ಧರಿಸುವ ಸಂಘಪರಿವಾರʼ: ಲುಲು ಮಾಲ್‌ ನಮಾಝ್‌ ಪ್ರಕರಣ ಮತ್ತು “ಆರ್‌ಎಸ್‌ಎಸ್‌; ಆಳ-ಅಗಲ”

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist