ಹೊಸ ಸರ್ಕಾರವು ಯಡಿಯೂರಪ್ಪನಂತೆ ಭ್ರಷ್ಟವಾಗಲಿದೆ: ಸಿದ್ದರಾಮಯ್ಯ

ಕರ್ನಾಟಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಹೊಸ ಸರ್ಕಾರವೂ ಕೂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತರ “ಭ್ರಷ್ಟ” ವಾಗಲಿದೆ. ಯಡಿಯೂರಪ್ಪನವರು ಕೆಳಗಿಳಿದರೆ ಏನೂ ನಷ್ಟವಿಲ್ಲ. ಯಡಿಯೂರಪ್ಪನವರೇ ಭ್ರಷ್ಟ, ಬಿಜೆಪಿಯೇ ಒಂದು ಭ್ರಷ್ಟ ಪಕ್ಷ ಎಂದು ಟೀಕಿಸಿದ್ದಾರೆ.

ಸಭೆಯ ಬಳಿಕ ವಿಧಾನ ಸೌಧದಲ್ಲಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧರಮಯ್ಯ ಅವರು, ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದಲ್ಲಿ ಕೆಟ್ಟ ಸರ್ಕಾರವನ್ನು ಕೊಟ್ಟಿದ್ದಾರೆ, ಅಭಿವೃದ್ಧಿಪರ ಇಲ್ಲದಿರುವ ಭ್ರಷ್ಟಾತಾರದಲ್ಲಿ ಕೂಡಿರುವ ಅದಕ್ಷ ಸರ್ಕಾರವನ್ನು ಕರ್ನಾಟಕದಲ್ಲಿ ನೀಡಿದ್ದಾರೆ. ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪನವರು ಕೆಳಗಿಳಿದರೆ ಏನೂ ನಷ್ಟವಿಲ್ಲ. ಯಡಿಯೂರಪ್ಪನವರೇ ಭ್ರಷ್ಟ, ಅವರ ಮಗನೂ ಭ್ರಷ್ಟ, ಹಾಗಾಗಿ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೆ ಬಹಳ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಯಡಿಯೂರಪ್ಪನವರನ್ನು ತೆಗೆಯುವುದರಿಂದ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಬರುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಹಾಗಾಗಿ ಹೊಸ ಸರ್ಕಾರವು ಯಡಿಯೂರಪ್ಪನಂತೆ ಭ್ರಷ್ಟವಾಗಲಿದೆ, ಅದರಲ್ಲಿರುವ ಸಚಿವರುಗಳೂ ಭ್ರಷ್ಟರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಾನು ಸುಮಾರು ಆರೇಳು ತಿಂಗಳಿನಿಂದ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ತೆಗೆಯುತ್ತಾರೆ ಎಂದು ಹೇಳುತ್ತಾ ಬಂದಿದ್ದೆ. ಅದನ್ನು ಯಾರೂ ನಂಬಿರಲಿಲ್ಲ. ನನಗೆ ಖಚಿತ ಮಾಹಿತಿ ಇತ್ತು, ಇವತ್ತು ಅದು ಸತ್ಯವಾಗಿದೆ ಎಂದು ತಮ್ಮ ಹಳೆಯ ಹೇಳಿಯನ್ನು ಮತ್ತೆ ಮಾಧ್ಯಮದವರಿಗೆ ಮರು ಉಲ್ಲೇಖಿಸಿದರು.

Please follow and like us:

Related articles

Share article

Stay connected

Latest articles

Please follow and like us: