ನಾಲ್ವರು ಭಾರತೀಯರು ಸೇರಿದಂತೆ 22 ಮಂದಿಯನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ಲಘು ವಿಮಾನವೊಂದು ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.
ತಾರಾ ವಿಮಾನ ಸಂಸ್ಥೆಗೆ ಸೇರಿದ್ದ 9NAET ಮಾದರಿಯ ವಿಮಾನವು ಪೊಖ್ರಾದಿಂದ ಜೊಮ್ಸೊಮ್ಗೆ ಹೊರಟಿತ್ತು. ಬೆಳ್ಳಗ್ಗೆ ಸುಮಾರು 9:55ರ ಸುಮಾರಿಗೆ ವಿಮಾನದ ಸಂಪರ್ಕ ಕಡಿತಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ವಿಮಾಣದ ಹುಡುಕಾಟಕ್ಕಾಗಿ ಎರಡು ಸೇನಾ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.