ಬೆಂಗಳೂರು : ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಟ್ಟ ಕೆಟ್ಟ ಶೀರ್ಷಿಕೆಗಳನ್ನು ನೀಡುವ ಮೂಲಕ ಶಾಸಕಿ ನಯನಾ ಮೋಟಮ್ಮ ಖಾಸಗಿ ಫೋಟೋಗಳನ್ನು ಹರಿಬಿಡಲಾಗಿದ್ದು ಈ ವಿಚಾರವಾಗಿ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಂಹಿಸಾ ಪ್ರತಿಕ್ರಿಯೆ ನೀಡಿದ್ದಾರೆ.

ಮೂಡಿಗೆರೆ ಕ್ಷೇತ್ರದಿಂದ ಚುನಾಯಿತರಾಗಿರುವ ನಯನಾ ಮೋಟಮ್ಮ ಖಾಸಗಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ರಾಜಕೀಯ ವೈರಿಗಳು ಅವರ ಮರ್ಯಾದಾ ಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಚೇತನ್ ಅಂಹಿಸಾ ಕಿಡಿಕಾರಿದ್ದಾರೆ.
ಇನ್ನು ಈ ವಿಚಾರವಾಗಿ ಸ್ವತಃ ನಯನಾ ಮೋಟಮ್ಮ ಕೂಡ ಪ್ರತಿಕ್ರಿಯಿಸಿದ್ದು ರಾಜಕೀಯ ಜೀವನ ಹಾಗೂ ಖಾಸಗಿ ಜೀವನಕ್ಕೆ ಲಿಂಕ್ ಮಾಡೋದು ಎಷ್ಟು ಸರಿ ಅಂತಾ ಪ್ರಶ್ನೆ ಮಾಡಿದ್ದಾರೆ.