‘ರಾಷ್ಟ್ರೀಯ ಲಾಕ್ಡೌನ್ ಬಹುತೇಕ ಅನಿವಾರ್ಯವಾಗಿದೆ’ – ಮೋದಿಗೆ ಮತ್ತೆ ಪತ್ರ ಬರೆದ ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ‘ವೈರಸ್ ಮತ್ತು ಅದರ ರೂಪಾಂತರಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುವಂತೆ’ ಒತ್ತಾಯಿಸಿದ್ದು  SARS-CoV2 ವೈರಸ್‌ನ ರೂಪಾಂತರಿತ ಆವೃತ್ತಿಗಳನ್ನು ದೇಶದಾದ್ಯಂತ ಹರಡದಂತೆ ಎಚ್ಚರಿಕೆ  ವಹಿಸಬೇಕು ಎಂದಿದ್ದಾರೆ.

ಸಾಂಕ್ರಾಮಿಕ ರೋಗದ ಜಾಗತಿಕ ಕೇಂದ್ರಬಿಂದುವಾಗಿ ಹೊರಹೊಮ್ಮಿರುವ ಭಾರತದ ಜನಸಂಖ್ಯೆಯ ಗಾತ್ರ ಮತ್ತು ಆನುವಂಶಿಕ ವೈವಿಧ್ಯತೆಯ ಬಗ್ಗೆ ಪ್ರಧಾನಿ ನೆನಪಿಸಿದ ಅವರು ವೈರಸ್ ಮತ್ತದರ ಡಬಲ್ ಮತ್ತು ಟ್ರಿಪಲ್ ರೂಪಾಂತರಿತ ತಳಿಗಳನ್ನು ತಡೆಯಲು ಕೇಂದ್ರವು ತನ್ನ ಅಧಿಕಾರ ಉಪಯೋಗಿಸಿ ಸಾಧ್ಯವಿರುವ ಎಲ್ಲವನ್ನೂ ಮಾಡದಿದ್ದರೆ ಪರಿಸ್ಥಿತಿ ಕೈ ಮೀರಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಪಂಚದ ಪ್ರತಿ ಆರು ಮಂದಿಯಲ್ಲಿ ಒಬ್ಬರು ಭಾರತೀಯರು. ನಮ್ಮ ಜನಸಂಖ್ಯೆಯ ಗಾತ್ರ, ಆನುವಂಶಿಕ ವೈವಿಧ್ಯತೆ ಮತ್ತು ಸಂಕೀರ್ಣತೆಯು ಭಾರತವನ್ನು ವೈರಸ್‌ಗೆ ವೇಗವಾಗಿ ರೂಪಾಂತರಗೊಳ್ಳಲು ಮತ್ತು ತನ್ನನ್ನು ಹೆಚ್ಚು ಸಾಂಕ್ರಾಮಿಕ ಹಾಗೂ ಹೆಚ್ಚು ಅಪಾಯಕಾರಿ ರೂಪವಾಗಿ ಪರಿವರ್ತಿಸಿಕೊಳ್ಳಲು‌ ನೆರವಾಗುತ್ತದೆ  ಎಂದು ಸಾಂಕ್ರಾಮಿಕ ರೋಗವು ಈಗಾಗಲೇ ತೋರಿಸಿಕೊಟ್ಟಿದೆ ” ಎಂದು ಬರೆದಿದ್ದಾರೆ.

ನಮ್ಮ ದೇಶದಲ್ಲಿ ಈ ವೈರಸ್ ಅನಿಯಂತ್ರಿತವಾಗಿ ಹರಡಲು ಅವಕಾಶ ನೀಡುವುದು ನಮ್ಮ ಜನರಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೂ ವಿನಾಶಕಾರಿಯಾಗಿದೆ” ಎಂದು ಅವರು ಹೇಳಿದರು.
ಕೇಂದ್ರದ “ಸ್ಪಷ್ಟ ಮತ್ತು ಸುಸಂಬದ್ಧವಾದ ಕೋವಿಡ್ ಮತ್ತು ವ್ಯಾಕ್ಸಿನೇಷನ್ ತಂತ್ರದ ಕೊರತೆ ಹಾಗೂ‌ ವೈರಸ್ ವಿರುದ್ಧದ ಅಕಾಲಿಕ ವಿಜಯವನ್ನು ಘೋಷಿಸುವಲ್ಲಿ ಅದರ ಆತುರ ಭಾರತವನ್ನು ಅತ್ಯಂತ ಅಪಾಯಕಾರಿ ಸ್ಥಾನದಲ್ಲಿರಿಸಿದೆ” ಮತ್ತು “ಮತ್ತೊಂದು ವಿನಾಶಕಾರಿ ರಾಷ್ಟ್ರೀಯ ಲಾಕ್ಡೌನ್ ಬಹುತೇಕ ಅನಿವಾರ್ಯವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

“ಜೀನೋಮ್ ಸೀಕ್ವೆಂಸಿಂಗ್ ಅನ್ನು ಬಳಸಿಕೊಂಡು ವೈರಸ್ ಮತ್ತು ರೂಪಾಂತರಗಳನ್ನು ವೈಜ್ಞಾನಿಕವಾಗಿ ಟ್ರ್ಯಾಕ್ ಮಾಡುವ, ಎಲ್ಲಾ ಹೊಸ ರೂಪಾಂತರಗಳ ವಿರುದ್ಧ ಎಲ್ಲಾ ಲಸಿಕೆಗಳ ದಕ್ಷತೆಯನ್ನು ಕ್ರಿಯಾತ್ಮಕವಾಗಿ ನಿರ್ಣಯಿಸುವ ಮತ್ತು  ಮತ್ತು ಅತ್ಯಂತ ವೇಗವಾಗಿ ಇಡೀ ಭಾರತೀಯರಿಗೆ  ಲಸಿಕೆ ನೀಡುವ ಮೂಲಕ ಸಮಸ್ಯೆಯನ್ನು ವಿಮರ್ಶಾತ್ಮಕವಾಗಿ ಪರಿಹರಿಸಬಹುದು” ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಕೋವಿಡ್ ಸೋಂಕಿನ ವಿನಾಶಕಾರಿ ಎರಡನೇ ಅಲೆಯ ಜೊತೆ  ಭಾರತ ಹೋರಾಡುತ್ತಿರುವಾಗ ರಾಹುಲ್  ಗಾಂಧಿಯವರ ಪತ್ರ ಬಂದಿದೆ.  ಇಂದು ಬೆಳಿಗ್ಗೆ ದೇಶವು ಹಿಂದಿನ 24 ಗಂಟೆಗಳಲ್ಲಿ ನಾಲ್ಕು ಲಕ್ಷ ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಈಗ ಸಕ್ರಿಯ ಪ್ರಕರಣಗಳು 35.6 ಲಕ್ಷಕ್ಕಿಂತ ಹೆಚ್ಚಿವೆ – ಇದು ಹಿಂದಿನ ದಾಖಲೆಯ ಗರಿಷ್ಠಕ್ಕಿಂತ 3.5 ಪಟ್ಟು ಹೆಚ್ಚು.

ಎರಡನೇ ಅಲೆಯ ಯುಕೆ ರೂಪಾಂತರದ  ಡಬಲ್ ಮತ್ತು ಟ್ರಿಪಲ್ ರೂಪಾಂತರಗಳು  ದೆಹಲಿ, ಮಹಾರಾಷ್ಟ್ರ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಬಲ್ ಮ್ಯೂಟಂಟ್ ಹೆಚ್ಚಿನ ಪ್ರಸರಣ ದರವನ್ನು ಹೊಂದಿದೆ ಮತ್ತು ಮಕ್ಕಳ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳೂ ಇವೆ.
“ಜೀನೋಮ್ ಸೀಕ್ವೆಂಸಿಂಗ್ ಅನ್ನು ಬಳಸಿಕೊಂಡು ವೈರಸ್ ಮತ್ತು ರೂಪಾಂತರಗಳನ್ನು ವೈಜ್ಞಾನಿಕವಾಗಿ ಟ್ರ್ಯಾಕ್ ಮಾಡುವ, ಎಲ್ಲಾ ಹೊಸ ರೂಪಾಂತರಗಳ ವಿರುದ್ಧ ಎಲ್ಲಾ ಲಸಿಕೆಗಳ ದಕ್ಷತೆಯನ್ನು ಕ್ರಿಯಾತ್ಮಕವಾಗಿ ನಿರ್ಣಯಿಸುವ ಮತ್ತು  ಮತ್ತು ಅತ್ಯಂತ ವೇಗವಾಗಿ ಇಡೀ ಭಾರತೀಯರಿಗೆ  ಲಸಿಕೆ ನೀಡುವ ಮೂಲಕ ಸಮಸ್ಯೆಯನ್ನು ವಿಮರ್ಶಾತ್ಮಕವಾಗಿ ಪರಿಹರಿಸಬಹುದು” ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ.


ಟ್ರಿಪಲ್ ರೂಪಾಂತರವು ಎಷ್ಟು ಸಾಂಕ್ರಾಮಿಕವಾಗಿದೆ ಅಥವಾ ಅದು ಎಷ್ಟು ಮಾರಕವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.  ಆದರೆ ಭಾರತದಲ್ಲಿ ಕೇವಲ 10 ವೈರಸ್ ಜೀನೋಮ್ ಅಧ್ಯಯನದ ಲ್ಯಾಬ್‌ಗಳಿವೆ.

ರೂಪಾಂತರಗಳು ಜನರಿಗೆ ಲಸಿಕೆ ನೀಡುವಲ್ಲಿ ತುರ್ತಾಗಿ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಭಾರತವು ಜನವರಿಯಲ್ಲಿ ವ್ಯಾಕ್ಸಿನೇಷನ್ ಅನ್ನು ಪ್ರಾರಂಭಿಸಿದೆ, ಆದರೆ ಇದು ಇತ್ತೀಚಿನ ವಾರಗಳಲ್ಲಿ ಲಸಿಕೆಗಳ ಪ್ರಮಾಣಗಳ ಕೊರತೆಯಿಂದ ಸ್ಥಗಿತಗೊಂಡಿದೆ. ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಸ ಹೆಣಗಾಡುತ್ತಿವೆ. ಅದಕ್ಕಾಗಿಯೇ ಕೇಂದ್ರವು ಕಳೆದ ತಿಂಗಳು ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ.ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ನಿರ್ಧರಿಸಿದೆ.


 ಕಳೆದ ವರ್ಷ ಮಾರ್ಚ್‌ನಲ್ಲಿ ಹೇರಲಾದ ಲಾಕ್‌ಡೌನ್‌ನಿಂದ ಕೆಟ್ಟ ಪರಿಣಾಮಕ್ಕೊಳಗಾದ ದುರ್ಬಲ ಗುಂಪುಗಳ ಬಗ್ಗೆ “ಸಹಾನುಭೂತಿಯಿಂದ ವರ್ತಿಸಬೇಕು” ಮತ್ತು ನಿರ್ಣಾಯಕ ಆರ್ಥಿಕ ಮತ್ತು ಆಹಾರ ಬೆಂಬಲವನ್ನು ಒದಗಿಸಬೇಕು ಎಂದು ರಾಹುಲ್ ಗಾಂಧಿ ಕೇಂದ್ರಕ್ಕೆ ಕರೆ ನೀಡಿದರು. ಬುಧವಾರ ರಾಹುಲ್ ಗಾಂಧಿಯವರು ವಿದೇಶಿ ನೆರವಿನ ಕೊಡುಗೆಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದರು. 

ಭಾರತವು ನೂರಾರು ಟನ್ ಆಕ್ಸಿಜನ್ನನ್ನು ವಿದೇಶದಿಂದ ನೆರವಿನ ರೂಪದಲ್ಲಿ ಪಡೆದಿದೆ ಆದರೆ ವಿತರಣೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಳೆದ ವಾರ ಕೇಂದ್ರವು ಈ ವಿಷಯದ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿತು, ‘ಹೊಂದಾಣಿಕೆ ಸಮಸ್ಯೆಗಳು’ ಮತ್ತು ‘ವಿತರಣೆಯಲ್ಲಿನ ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ’ ವಿಳಂಬವಾಗುತ್ತಿದೆ ಎಂದು ಹೇಳಿಕೆ ಕೊಟ್ಟಿತ್ತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...