ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ನಟರಾದ ಅಜಯ್ ದೇವಗನ್ ಮತ್ತು ಸೂರ್ಯ 68ನೇ ಸಾಲಿನ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದರು.
ಶುಕ್ರವಾರ ವಿಜ್ಞಾನ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಜಾನಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅಜಯ್ ದೇವಗನ್ ಮತ್ತು ಸುರಾರೈ ಪೊಟ್ರು ತಮಿಳು ಚಿತ್ರದಲ್ಲಿನ ಅಭಿನಯಕ್ಕಾಗಿ ಸೂರ್ಯ ಜಂಟಿ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದರು.
ಸೂರರೈ ಪೊಟ್ರು ಶ್ರೇಷ್ಠ ನಟ ಅಲ್ಲದೇ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದು, ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಅಪರ್ಣಾ ಬಾಲಮುರಳಿ ಸ್ವೀಕರಿಸಿದರು. ಅಲ್ಲದೇ ಹಿನ್ನೆಲೆ ಸಂಗೀತಕ್ಕಾಗಿ ಮತ್ತು ಶ್ರೇಷ್ಠ ಚಿತ್ರಕಥೆಗಾಗಿ ಪ್ರಶಸ್ತಿಯನ್ನು ಪಡೆಯಿತು.