
ನಾಗಮಂಗಲ ಎಪಿಎಂಸಿ APMC ಕಚೇರಿಯಲ್ಲಿ ಸಭೆ meeting ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,”ಘಟನೆಯ ಸಂದರ್ಭದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದ್ದು ಅವನ್ನು ಪರಿಶೀಲನೆ ನಡೆಸಲಾಗುವುದು” ಎಂದರು.
ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ.ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು. ನಮ್ಮ ನಾಗಮಂಗಲ ಶಾಂತಿ ಸೌಹಾರ್ದತೆಯ ತಾಣ. ಇಲ್ಲಿ ಯಾವುದೇ ಅನುಚಿತ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ. ನಾನು ಹೊರಗೆ ಹೋಗಿದ್ದೆ.ಊರಿನಿಂದ ಫೋನ್ ಬಂತು ಈ ರೀತಿ ಘಟನೆಯಾಗಿದೆ ಅಂತ. ಕೂಡಲೇ ನಾನು ಎಡಿಜಿಪಿ, ಎಸ್ಪಿಗೆ ಕರೆ ಮಾಡಿದೆ ಮಾಹಿತಿ ಪಡೆದುಕೊಂಡೆ. ಮುಸ್ಲಿಂ ಹಾಗೂ ಹಿಂದೂ ನಡುವೆ ಘರ್ಷಣೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು” ಎಂದರು.
“ಪೊಲೀಸರು ಕನ್ವಿನ್ಸ್ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ದುಡುಕುವುದು ಬೇಡ. ದೇವರ ಕೆಲಸ ಈ ರೀತಿಯಾಗಿ ಕಮ್ಯೂನಲ್ಗೆ ತಿರುಗುವುದು ಬೇಡ. ಶಾಂತಿ ಕಾಪಾಡುವ ಕೆಲಸ ಎಲ್ಲರದ್ದೂ ಆಗಬೇಕಿದೆ” ಎಂದು ತಿಳಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ Union Minister Kumaraswamy ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಅವರು ಮಾಜಿ ಮುಖ್ಯಮಂತ್ರಿಗಳು, ಸಾಕಷ್ಟು ಅನುಭವ ಇದೆ. ಅವರು ಇದನ್ನು ತಿಳಿ ಆಗಲು ಸಲಹೆ, ಸೂಚನೆ ಮಾರ್ಗದರ್ಶನ ಕೊಡ್ತಾರೆ ಅಂದುಕೊಂಡಿದ್ದೆ.ಅದನ್ನ ಮೀರಿ ಅವರು ರಾಜಕೀಯವಾಗಿ ಮಾತನಾಡ್ತಾರೆ ಅಂದರೆ ದೇವರು ಒಳ್ಳೆದು ಮಾಡ್ಲಿ. ನಾನು ಖಂಡಿತವಾಗಿ ರಾಜಕೀಯವಾಗಿ ಉತ್ತರ ನೀಡಲು ಹೋಗಲ್ಲ” ಎಂದರು.