ಮುಂದಿನ ವಾರ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಮೂರು ಪಕ್ಷಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಇದರಿಂದ ಚುನಾವಣಾ ಅಖಾಡ ರಂಗೇರಿದೆ.
ಇತ್ತ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಬಿಡಾರ ಹೂಡಿದ್ದು, ಬದ್ದವೈರಿಗಳಾದ ಬಿಜೆಪಿ ಹಾಗೂ ಜೆಡಿಎಸ್ ಗೆ ತಕ್ಕ ಪಾಠ ಕಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಇತ್ತ ಕಿಂಗ್ ಮೇಕರ್ ಜೆಡಿಎಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಇತ್ತ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಒಲವು ಯಾರ ಕಡೇ ಇದೆಯೋ ಅವರು ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಆಕಾಂಕ್ಷಿಗಳ ಒಂದು ಬಣ ಮಾಜಿ ಸಿಎಂ ಹೆಚ್.ಡಿ.ಕುಮಾರಸಾಮಿ ಮನೆ ಸುತ್ತ ಗಿರಕಿ ಹೊಡೆದರೆ ಮತ್ತೊಂದು ಬಣ ಸಾ.ರಾ.ಮಹೇಶ್ ಹಿಂದೆ ಸುತ್ತಿತ್ತಿದ್ದಾರೆ. ಇತ್ತ ಶಾಸಕ ಸಾ.ರಾ.ಮಹೇಶ್ ಜಿಲ್ಲೆಯ ಜೆಡಿಎಸ್ನ ಸರ್ವೋಚ್ಚ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಮಹತ್ವದ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಾ.ರಾ.ಮಹೇಶ್ ಈ ಬಾರಿ ಮೇಯರ್ ಹುದ್ದೆ ಜೆಡಿಎಸ್ ಗೆ ಸಿಗಲಿದೆ. ಸ್ಥಳೀಯ ಮಾಜಿ ಸಿಎಂ ನಡೆ ಬೇಸರ ತರಿಸಿದ್ದು ಕಾಂಗ್ರೆಸ್ ಜೊತೆ ನಮಗೆ ಮೈತ್ರಿ ಬೇಡ ಅನಿಸಿದೆ ಬಿಜೆಪಿ ಜೊತೆ ಸಖ್ಯ ಬೆಳೆಸುವ ಕುರಿತು ಇನ್ನು ತೀರ್ಮಾನಿಸಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸದ್ಯ 65 ಸದಸ್ಯ ಬಲ ಹೊಂದಿರುವ ಮೈಸೂರು ಪಾಲಿಕೆಯಲ್ಲಿ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿದಂತೆ ಒಟ್ಟು 73 ಮಂದಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಸಂಖ್ಯೆಯ ಬಲಾಬಲ
65+1 +4 +3=73.
ಬಿಜೆಪಿ
22+1+2+1=26
(ಪ್ರತಾಪ್ ಸಿಂಹ, ಶಾಸಕ ಎಸ್ ಎ ರಾಮದಾಸ್, ಎಲ್ ನಾಗೇಂದ್ರ ಪಕ್ಷೇತರ ಮಾ.ವಿ ರಾಂಪ್ರಸಾದ್.)
ಜೆಡಿಎಸ್
17+1+2+2=22
(ಶಾಸಕ ಜಿ ಟಿ ದೇವೇಗೌಡ, MLC ಮಂಜೇಗೌಡ, ಮರಿತಿಬ್ಬೆಗೌಡ, ಪಕ್ಷೇತರ ಇಬ್ಬರು ಸದಸ್ಯರು )
ಕಾಂಗ್ರೆಸ್
20+1+1+2=24
(ಶಾಸಕ ತನ್ವಿರ್ ಸೇಠ್, MLC ಡಾ. ಡಿ ತಿಮ್ಮಯ್ಯ, ಇಬ್ಬರು ಪಕ್ಷೇತರ ಸದಸ್ಯರು.)