ಡಿಯೋರಿಯಾ, ಡಿಹೈಡ್ರೆಷನ್ ನಿಂದ ಬಳಲುತ್ತಿರುವ ಶರತ್ ಕುಮಾರ್ ಅವರನ್ನು ಚೆನ್ನೈನಯ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಜೇಮ್ಸ್ ಹಾಗೂ ರಾಜಕುಮಾರ ಸಿನಿಮಾದಲ್ಲಿ ನಟಿಸಿರುವ ತಮಿಳು ನಟ ಶರತ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡಿಯೋರಿಯಾ, ಡಿಹೈಡ್ರೆಷನ್ ನಿಂದ ಬಳಲುತ್ತಿರುವ ಶರತ್ ಕುಮಾರ್ ಅವರನ್ನು ಚೆನ್ನೈನಯ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಹಾಗೂ ಮಗಳು ವರಲಕ್ಷ್ಮಿ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ.
ಆದರೆ ಶರತ್ ಕುಮಾರ್ ಅವರ ಆರೋಗ್ಯ ಸಂಬಂಧ ಆಸ್ಪತ್ರೆ ಈ ತನಕ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಬಹುಭಾಷ ನಟ ಶರತ್ ಕುಮಾರ್ ಅವರು ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳು ಹಾರೈಸಿದ್ದಾರೆ.