ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಮುಧೋಳ ಶ್ವಾನಗಳು ಇದೀಗ ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ (SPG)ಗೆ ಸೇರಿವೆ.
ಬಾಗಲಕೋಟೆಯ ಮುಧೋಳದ ತಿಮ್ಮಾಪುರದ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ SPG ವೈದ್ಯರ ತಂಡ ಎರಡು ಗಂಡು ನಾಯಿ ಮರಿಗಳನ್ನ ಕರೆದೊಯ್ದಿದ್ದಾರೆ.
ಮುಧೋಳ ಶ್ವಾನಗಳು ಈಗಾಗಲೇ ಕರ್ನಾಟಕ ಪೊಲೀಸ್ ಪಡೆ, ಕೇರಳ ಪೊಲೀಸ್, ಗಡಿ ಭದ್ರತಾ ಪಡೆ(BSF)ಯಲ್ಲಿ ಮುಧೋಳ ಶ್ವಾನಗಳು ಕಾರ್ಯ ನಿರ್ವಹಿಸುತ್ತಿವೆ.