• Home
  • About Us
  • ಕರ್ನಾಟಕ
Wednesday, January 21, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

“ಮುಂಗಾರು ಮಳೆ” ನಂತರ “ಮನದ ಕಡಲು” .

ಪ್ರತಿಧ್ವನಿ by ಪ್ರತಿಧ್ವನಿ
November 28, 2024
in Top Story, ಅಂಕಣ, ಅಭಿಮತ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ಇದು ಯೋಗರಾಜ್ ಭಟ್ ಹಾಗೂ ಇ.ಕೃಷ್ಣಪ್ಪ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮತ್ತೊಂದು ವಿಭಿನ್ನ ಪ್ರೇಮ ಕಥಾನಕ .

ADVERTISEMENT

ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುಂಗಾರು ಮಳೆ”. ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು “ಮನದ ಕಡಲು”.‌ ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಿ.ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. ಬೆಂಗಳೂರಿನ ಅರಮನೆ ಆವರಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮದ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆತ್ಮೀಯವಾಗಿ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆ ಸಹ ಇದೇ ಸಂದರ್ಭದಲ್ಲಿ ಅನಾವರಣವಾಯಿತು ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

‘ಮುಂಗಾರು ಮಳೆ’ ನಂತರ ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಇನ್ನೊಂದು ಚಿತ್ರ ನಿರ್ದೇಶನ ಮಾಡುವ ಯೋಚನೆ ಇತ್ತು ಎಂದು ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ಆದರೆ ಅವರು ರಾಜಕೀಯದಲ್ಲಿ ಮತ್ತು ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆ. ಕೊರೋನ ನಂತರ ಮತ್ತೆ ಒಟ್ಟಿಗೆ ಚಿತ್ರ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಎಂದು ಕೃಷ್ಣಪ್ಪ ಹೇಳಿದರು. ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಆಗಲೇ ಯಾವುದೋ ಕೆಲಸದ ವಿಷಯವಾಗಿ ಸುಮುಖ ಫೋನ್‍ ಮಾಡಿದ್ದ. ಫೋಟೋ ಕಳುಹಿಸು ಎಂದೆ. ಅವನು ಎಲ್ಲರಿಗೂ ಇಷ್ಟವಾದ. ಜೊತೆಗೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್‍, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್‍ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಪರ್ಮಿಷನ್‍ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಬಿಸಿಲು, ರಣಮಳೆಯ ನಡುವೆ ಚಿತ್ರೀಕರಣ ಸುಲಭವಲ್ಲ. ಆದರೆ, ಬಹಳ ಚೆನ್ನಾಗಿ ಬಂದಿದೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣ ಮುಗಿದಿದೆ ಎಂದರು .

ಕಥೆ ಚೆನ್ನಾಗಿರಬೇಕು. ಕನ್ನಡಿಗರು ಮೆಚ್ಚುವ ಹಾಗೆ ಮಾಡಬೇಕು. ಇದೊಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸವಾಗುತ್ತಿಲ್ಲ. ಹೊಸಬರಿಗೆ ಒಳ್ಳೇದಾಗಬೇಕು. ಇದು ಸಹ “ಮುಂಗಾರು ಮಳೆ” ಮಟ್ಟಕ್ಕೆ ಹೋಗಬೇಕು. ಮಧ್ಯೆ ರಾಜಕಾರಣಕ್ಕೆ ಹೋಗಿದ್ದರಿಂದ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲ. ಯೋಗರಾಜ್‍ ಭಟ್‍ ಸಹ ಬ್ಯುಸಿಯಾಗಿದ್ದರು. ಈಗ ಅದು ಸಾಧ್ಯವಾಗಿದೆ ಎಂದರು ನಿರ್ಮಾಪಕ ಇ.ಕೃಷ್ಣಪ್ಪ.

“ಮುಂಗಾರು ಮಳೆ” ಚಿತ್ರದಿಂದ ಇ.ಕೃಷ್ಣಪ್ಪ ಅವರ ನಿರ್ಮಾಣದ ಎಲ್ಲಾ ಚಿತ್ರಗಳಲ್ಲೂ ಸಹ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯೋಗರಾಜ್ ಭಟ್ ಅವರ ಜೊತೆಗೆ ಹದಿನೆಂಟು ವರ್ಷಗಳ ನಂತರ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ಸಹ ನಿರ್ಮಾಪಕ ಗಂಗಾಧರ್.

ನಟ ಎಂದರೆ ಜಿಮ್‍ನಿಂದ ಬರಬೇಕು ಎಂಬಂತಾಗಿದೆ. ಅವರಿಗೆ ಭಾಷೆ-ಭಾವ ಗೊತ್ತಿರುವುದಿಲ್ಲ. ಸಿನಿಮಾಗೆ ಬೇಕಾಗಿದ್ದು ಅಭಿನಯ ಅನ್ನೋದನ್ನೇ ಅವರು ಮರೀತಾರೆ. ಆದರೆ, ಸುಮುಖನಿಗೆ ಅಂಥ ಯಾವ ರೋಗ ಇಲ್ಲ. ಇವನು ಓದಿಕೊಂಡಿದ್ದಾನೆ. ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾನೆ. ಚೆನ್ನಾಗಿ ನಟಿಸುತ್ತಾನೆ. ಭಟ್ರು ಮತ್ತು ಕೃಷ್ಣಪ್ಪ ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಶೀರ್ಷಿಕೆ ಬಹಳ ಚೆನ್ನಾಗಿದೆ. ಪ್ಯಾನ್‍ ಇಂಡಿಯಾ ಸಿನಿಮಾ ಬೇಡ, ಕನ್ನಡ ಸಿನಿಮಾ ಮಾಡೋಣ ಎಂದರಂತೆ ಕೃಷ್ಣಪ್ಪ. ಹೌದು, ಎಲ್ಲರೂ ಅಲ್ಲಿಗೆ ಹೋದರೆ ಇಲ್ಲಿ ಮನೆ ನೋಡಿಕೊಳ್ಳೋದು ಯಾರು ಎಂದರು ನಟ ರಂಗಾಯಣ ರಘು.

ಯೋಗರಾಜ್‍ ಭಟ್‍ ಬಹಳ ಮುತ್ತುವರ್ಜಿಯಿಂದ ನನ್ನ ಪಾತ್ರ ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ ನಾನು 100 ವರ್ಷದ ಮುದುಕನ ಪಾತ್ರ ಮಾಡಿದ್ದೇನೆ. ಆದರೆ, ಅವನದ್ದು 70 ವರ್ಷಗಳ ಚೈತನ್ಯ. ವಯಸ್ಸಾಯ್ತು ಅಂತ ತಲೆ ಆಡಿಸುವ ಹಾಗಿಲ್ಲ, ಮೈ ಬಗ್ಗಿಸುವ ಹಾಗಿಲ್ಲ. ಸಾತ್ವಿಕವಾಗಿ ತನ್ನ ವಯಸ್ಸನ್ನು ಅಭಿನಯದ ಮೂಲಕ ಹೇಳುವಂತಹ ಪಾತ್ರ. ಬಹಳ ಚೆನ್ನಾಗಿದೆ ಎಂದು ನಟ ದತ್ತಣ್ಣ ತಿಳಿಸಿದರು.

ಈಗಿನ ಕಾಲದ ನವಯುವಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನವರು ಜೀವನದಲ್ಲಿ ಏನು ಮಾಡಬೇಕು? ಎಂಬ ಗೊಂದಲದಲ್ಲಿರುತ್ತಾರೆ. ಅದು ಈ ಚಿತ್ರದಲ್ಲಿದೆ. ಇದೊಂದು ದೊಡ್ಡ ಜವಾಬ್ದಾರಿ. ಯೋಗರಾಜ್‍ ಭಟ್‍ ಅವರ ಜೊತೆಗೆ ತುಂಬಾ ಕಲಿಯೋದಿದೆ. ಪ್ರತಿದಿನ ಅವರು ಹೊಸ ಆಲೋಚನೆಯೊಂದಿಗೆ ಬರುತ್ತಾರೆ. ಹೊಸ ಪ್ರಯೋಗ ಮಾಡುತ್ತಾರೆ ಎಂದು ನಾಯಕ ಸುಮುಖ ಹೇಳಿದರು.

ನಾಯಕಿಯರಾದ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್‍ ರೈ ಪಾತಾಜೆ, ಗೀತರಚನೆಕಾರ ಜಯಂತ್‍ ಕಾಯ್ಕಿಣಿ, ಪ್ರತಾಪ್‍ ರಾವ್‍ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Tags: Anjali AnishE KrishnappaEK Entertrainergolden star ganeshJayanth KaykaniKannada movieKarnatakaaManada KadaluPrathap RavRangayana RaghuRashika ShettysandalwoodSanthosh Rai PatajiSumukhaV HarikrishnaYogaraj Bhat
Previous Post

ಖಡಕ್ ವಾರ್ನಿಂಗ್ ಕೊಟ್ಟ ಡಿ-ಬಾಸ್ ಫ್ಯಾನ್ಸ್!

Next Post

ಮುಹೂರ್ತ ನೆರವೇರಿಸಿದ ಯುವರಾಜ್‌ ಕುಮಾರ್‌ ಬಹು ನಿರೀಕ್ಷಿತ ಚಿತ್ರ “ಎಕ್ಕ”

Related Posts

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!
Top Story

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!

by ಪ್ರತಿಧ್ವನಿ
January 21, 2026
0

ಮೇಷ ರಾಶಿಯ ಇಂದಿನ ಭವಿಷ್ಯ ಮೇಷ ರಾಶಿಯವರು ಇಂದು ನೀವು ಅಂದುಕೊಂಡ ಕೆಲಸಗಳಲ್ಲಿ ಜಯ ಸಿಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಬದಲಾವಣೆಗಳನ್ನು ಕಾಣಬಹುದು. ಆತುರದಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು...

Read moreDetails
ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

January 20, 2026

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

January 20, 2026
ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

January 20, 2026
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

January 20, 2026
Next Post

ಮುಹೂರ್ತ ನೆರವೇರಿಸಿದ ಯುವರಾಜ್‌ ಕುಮಾರ್‌ ಬಹು ನಿರೀಕ್ಷಿತ ಚಿತ್ರ “ಎಕ್ಕ”

Recent News

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!
Top Story

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!

by ಪ್ರತಿಧ್ವನಿ
January 21, 2026
Top Story

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

by ಪ್ರತಿಧ್ವನಿ
January 20, 2026
ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ
Top Story

ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

by ಪ್ರತಿಧ್ವನಿ
January 20, 2026
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ
Top Story

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

by ಪ್ರತಿಧ್ವನಿ
January 20, 2026
Pavithra Gowda: ಪವಿತ್ರಾ ಗೌಡಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಹೈಕೋರ್ಟ್
Top Story

Pavithra Gowda: ಪವಿತ್ರಾ ಗೌಡಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಹೈಕೋರ್ಟ್

by ಪ್ರತಿಧ್ವನಿ
January 20, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!

Daily Horoscope: ಇಂದಿನ ಅದೃಷ್ಟ ರಾಶಿಗಳಿವು..! ಇವರು ಮುಟ್ಟಿದೆಲ್ಲಾ ಚಿನ್ನ..!

January 21, 2026
ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

January 20, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!