ಇತ್ತೀಚಿಗೆ NDA ಮೈತ್ರಿಕೂಟ ತೊರೆದು ಮಹಾಘಟ್ ಬಂಧನ್ ಸೇರಿದ ಸಂಯುಕ್ತ ಜನತಾ ದಳದ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದರು.
ವಿಪಕ್ಷಗಳ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ನಿತೀಶ್ರನ್ನು ಬಿಂಬಿಸಲಾಗುತ್ತಿದೆ. ಆದರೆ, ಈಚೆಗೆ ಬಿಡುಗಡೆಯಾಗಿರುವ ಸಮೀಕ್ಷೆಯೊಂದು ವಿಪಕ್ಷಗಳ ನಿದ್ದೆಗೆಸಿರುವುದಂತು ನಿಜ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಮೈತ್ರಿ ಕೂಟವು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸರಳ ಬಹುಮತ ಪಡೆಯುತ್ತದೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಇದರ ಜೊತೆಗೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುವ ಅತ್ಯಂತ ಜನಪ್ರಿಯ ನಾಯಕರಾಗಿಯೇ ಉಳಿದಿದ್ದಾರೆ.
ಹಾಲಿ ಮಧ್ಯಂತರ ಚುನಾವಣೆ ನಡೆದರು ಸಹ NDA ಮೈತ್ರಿ ಕೂಟವು 286 ಸ್ಥಾನಗಳನ್ನು ಗೆಲುವ ಮೂಲಕ ಸರಳ ಬಹುಮತ ಪಡೆಯುತ್ತದೆ. ಈಗ ಚುನಾವಣೆ ನಡೆದರು ಸಹ NDA ಮೈತ್ರಿಕೂಟವು ಹಿಂದಿನ ಚುನಾವಣೆಗಿಂತ 20ಕ್ಕಿಂತ ಅಧಿಕ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟವು 300ಕ್ಕಿಂತ ಅಧಿಕ ಸ್ಥಾನಗಳನ್ನು ಜಯಿಸಿದೆ. ನಿತೀಶ್ ಕುಮಾರ್ NDA ಮೈತ್ರಿಕೂಟದಿಂದ ಹೊರಬರುವುದಕ್ಕು ಮುನ್ನವೇ ಬಹುಪಾಲು ಸಮೀಕ್ಷೆ ನಡೆಸಲಾಗಿತ್ತು. ಆದರೆ, ಜೆಡಿಯು ಹೊರ ಬಂದ ನಂತರ NDAಗೆ ಹಿನ್ನಡೆಯಾಗಿದೆ ಎಂದು ತಿಳಿದು ಬಂದಿದೆ.
ಎಂಟು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿರುವ ಪ್ರಧಾನಿ ಮೋದಿ ಹಣದುಬ್ಬರ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಕೋವಿಡ್ ನಡುವೆ ಮೋದಿ ಜನಪ್ರಿಯತೆ ಕುಸಿದಿಲ್ಲ ಎಂಬುದು ಗಮನಾರ್ಹ ಸಂಗತಿ.
ಸಮೀಕ್ಷೆಯ ಭಾಗವಾಗಿದ್ದ ಶೇ.53ರಷ್ಟು ಮಂದಿ ಮುಂದಿನ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆಗೆ ಮೋದಿ ಎಂದಿದ್ದಾರೆ. ಶೇ 9ರಷ್ಟು ಮಂದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಾಗಬೇಕು ಎಂದರೆ ಶೇ 7ರಷ್ಟು ಮಂದಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೆಸರೇಳಿದ್ದಾರೆ.