ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನ ಖಾಸಗಿ ಕ್ಲಿನಿಕ್ (Clinic) ಒಂದರಲ್ಲಿ ಭಾನುವಾರ ಭೀಕರ ಘಟನೆಯೊಂದು ನಡೆದಿದ್ದು, ರೋಗಿಯೊಬ್ಬರ ಕೈಯಲ್ಲಿದ್ದ ಮೊಬೈಲ್ (Mobile) ಫೋನ್ ಹಠಾತ್ತನೆ ಬಾಂಬ್‌ನಂತೆ ಸ್ಫೋಟಗೊಂಡು (Explosion) ಬೆಂಕಿ ಹೊತ್ತಿಕೊಂಡಿದೆ. ಈ ಅನಿರೀಕ್ಷಿತ ದುರ್ಘಟನೆಯಿಂದಾಗಿ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಕೆಲಕಾಲ ತೀವ್ರ ಆತಂಕಕ್ಕೆ ಒಳಗಾಗಿದ್ದು, ಸಂಪೂರ್ಣ ದೃಶ್ಯಾವಳಿಗಳು ಕ್ಲಿನಿಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕ್ಲಿನಿಕ್ ಒಳಗೆ ಏಕಾಏಕಿ ಮೊಬೈಲ್ ಸ್ಫೋಟ
ಗ್ವಾಲಿಯರ್‌ನ ‘ದೃಷ್ಟಿ ಸ್ಕಿನ್ ಆಂಡ್ ಚೈಲ್ಡ್ ಕ್ಲಿನಿಕ್’ಗೆ ವ್ಯಕ್ತಿಯೊಬ್ಬರು ಡಾ. ಅಶುತೋಷ್ ಶರ್ಮಾ ಅವರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಲು ಬಂದಿದ್ದರು. ತಪಾಸಣೆಗಾಗಿ ಕಾಯುತ್ತಿದ್ದ ವೇಳೆ, ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಮೊಬೈಲ್ ಫೋನ್ ದಿಢೀರನೆ ಸ್ಫೋಟಗೊಂಡು ಬೆಂಕಿಯ ಜ್ವಾಲೆಗಳು ಹೊರಹೊಮ್ಮಿವೆ. ನವಜಾತ ಶಿಶುಗಳು ಮತ್ತು ಇತರ ರೋಗಿಗಳು ಉಪಸ್ಥಿತರಿದ್ದ ಕ್ಲಿನಿಕ್ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಆವರಣದಲ್ಲಿ ಭಾರೀ ಭೀತಿ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.
A mobile phone exploded in a patient’s hand inside a clinic in Madhya Pradesh’s Gwalior on Sunday, triggering a fire and panic among patients and staff. The incident, which was captured on CCTV, took place at Drishti Skin and Child Clinic, where the patient had arrived for a consultation with Dr Ashutosh Sharma.
The phone suddenly burst into flames while the patient was holding it, raising concerns as newborn babies and other patients were present inside the clinic at the time.
Clinic staff rushed to the spot after noticing the fire and poured water on the burning phone to extinguish it. Their prompt response helped bring the situation under control and prevented the flames from spreading inside the healthcare facility.
Fortunately, no injuries were reported in the incident. The CCTV footage captured the phone explosion, the fire and the clinic staff’s efforts to prevent a potentially serious mishap.
— The Siasat Daily (@TheSiasatDaily) November 2, 2026
ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಫೋನ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಎಚ್ಚೆತ್ತ ಹೊರಗಿನ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಕಿಂಚಿತ್ತೂ ತಡಮಾಡದೆ ಉರಿಯುತ್ತಿದ್ದ ಮೊಬೈಲ್ ಮೇಲೆ ನೀರು ಸುರಿದು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಬೆಂಕಿ ಕ್ಲಿನಿಕ್‌ನ ಇತರ ಭಾಗಗಳಿಗೆ ಹರಡುವುದು ತಪ್ಪಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ಮೊಬೈಲ್ ಏಕಾಏಕಿ ಸ್ಫೋಟಗೊಂಡ ಕ್ಷಣದಿಂದ ಹಿಡಿದು, ಬೆಂಕಿ ಹೊತ್ತಿಕೊಂಡದ್ದು ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸುವವರೆಗಿನ ಸಂಪೂರ್ಣ ದೃಶ್ಯಗಳು ಕ್ಲಿನಿಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರವು ನವಜಾತ ಶಿಶುಗಳು ಸೇರಿದಂತೆ ಹಲವು ರೋಗಿಗಳನ್ನು ಸಂಭವನೀಯ ದೊಡ್ಡ ದುರಂತದಿಂದ ಪಾರುಮಾಡಿದೆ.
ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸಲು ಗ್ರಾಮಾನುಭವ ಕಾರ್ಯಕ್ರಮ!






