
ಇಂದು ನಡೆದ ವಿಧಾನ ಸಭಾ ಕಲಾಪದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂದಿನ ಕಲಾಪದಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾದ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಮತ್ತು ಮೈಸೂರು ಮೂಡಾ ವಿವಾದದ ಬಗ್ಗೆ ಸಂಪೂರ್ಣ ಅಂಕಿ ಅಂಶಗಳೊಂದಿಗೆ ವಿವರಣೆ ನೀಡಿ ಮಾತನಾಡಿದ ಎ.ಎಸ್.ಪೊನ್ನಣ್ಣ ನವರು ತಾವು ಅತ್ಯಂತ ಉತ್ತಮ ಸಂಸದೀಯ ಪಟು ಎಂಬುದನ್ನು ನಿರೂಪಿಸಿದ್ದಾರೆ. ಸದನದ ಮುಂದೆ ಐದಾರು ಬಾರಿ ಶಾಸಕರಾಗಿ ಅನುಭವ ಹೊಂದಿದ ಮಾದರಿಯಲ್ಲಿ ಅವರು ಮಾತನಾಡಿದ್ದಾರೆ. ಮೊದಲ ಬಾರಿಗೆ ಶಾಸಕರಾದವರು ಅದು ಕೇವಲ ಒಂದು ವರ್ಷದ ಅನುಭವದಲ್ಲಿ ಇಷ್ಟೊಂದು ಸ್ಪಷ್ಟವಾಗಿ ಅಧಿವೇಶನದಲ್ಲಿ ಮಾತನಾಡಿದ್ದು ಕರ್ನಾಟಕ ವಿಧಾನ ಸಭಾ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ಹಿರಿಯ ಸಚಿವರು ,ಶಾಸಕರು ಪೊನ್ನಣ್ಣ ನವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.