
ಬೆಳಗಾವಿ, ಸುವರ್ಣ ಸೌಧ, ಡಿಸೆಂಬರ್ 09: ಇಲ್ಲಿನ ಸುವರ್ಣಸೌಧದಲ್ಲಿ ಇಂದು ಆರಂಭವಾದ ವಿಧಾನ ಮಂಡಲ ಕಲಾಪದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹಾಗೂ ರತನ್ ಟಾಟಾ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಿ ಮಾತನಾಡಿದರು. ,

ಮನೋಹರ್ ತಹಶೀಲ್ದಾರ್ ಅವರು ಸರಳಜೀವಿ, ಅವರ ಪರಿಚಯವಾದ ನಂತರ ಕಳೆದ ಹತ್ತು ವರ್ಷದಿಂದ ನಾನು ಅವರನ್ನು ಬಲ್ಲೆ, ಪಕ್ಷಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಅವರ ನಿಧನ ದೊಡ್ಡ ನಷ್ಟ ತಂದಿದೆ ಎಂದರು.
ಇತ್ತೀಚೆಗೆ ನಿಧನರಾದ ಮೇರು ಉದ್ಯಮಿ ರತನ್ ಟಾಟಾ ಅವರ ಕುರಿತು ಮಾತನಾಡಿದ ಸಚಿವ ಲಾಡ್ ಅವರು, ಉದ್ಯಮ ಜಗತ್ತಿನಲ್ಲಿ ನೈತಿಕ ಮೌಲ್ಯಕ್ಕೆ ಬೆಲೆ ಇಲ್ಲವಾಗಿರುವ ಇಂದಿನ ದಿನಗಳಲ್ಲಿ ರತನ್ ಅವರು ಹಿರಿಯ ವ್ಯಕ್ತಿಯಾಗಿ ಇದ್ದವರು, ಕಂಪನಿಯ ಬೆಳವಣಿಗೆಗೆ ಮಾತ್ರ ಆದ್ಯತೆ ನೀಡದೆ ಪ್ರಗತಿಗೆ ಮೌಲ್ಯಗಳನ್ನು ಸೇರಿಸಿದ್ದರು ಎಂದರು.
ರತನ್ ಅವರು, ಪ್ರಾಮಾಣಿಕತೆ, ಶಿಸ್ತು, ನೈತಿಕತೆ ಹೀಗೆ ಎಲ್ಲವೂ ಉದ್ಯಮದ ಭಾಗವಾಗಿರಬೇಕು ಎಂದು ಬಯಸಿದ್ದರು. ಯಶಸ್ಸಿಗೆ ಮಾನವೀಯತೆ, ನೈತಿಕತೆ, ಇವು ಮೂರೂ ಸೇರಿಸಿದ್ದ ವ್ಯಕ್ತಿ ಎಂದರು.
ನಾನೂ ಉದ್ಯಮದಿಂದ ಬಂದವನಾಗಿ ಒಬ್ಬ ಉದ್ಯಮಿ ನಿಷ್ಠೆಯಿಂದ , ಡಿಗ್ನಿಟಿಯಿಂದ, ದೇಶಪ್ರೇಮದಿಂದ ಗ್ರೇಟ್ ಆಗಬಹುದು ಎಂಬುದನ್ನು ರತನ್ ಅವರು ತೋರಿಸಿಕೊಟ್ಟಿದ್ದರು ಎಂದು ಬಣ್ಣಿಸಿದರು.





