ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ನಂಬಿಸಿ 13 ವರ್ಷದ ಬಾಲಕಿಯನ್ನು ವಿವಾಹಿತ ಮುಸ್ಲಿಂ ಯುವಕ ಅತ್ಯಾಚಾರ ಎಸಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ನಡೆದಿದೆ.
ಯೂನಸ್ ಪಾಷಾ(25) ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ಯ ಧರ್ಮದ ಬಾಲಕಿಯೊಂದಿಗೆ ಅದೇ ಶಾಲೆಯ ಮುಸ್ಲಿಂ ಬಾಲಕನ ಕಡೆಯಿಂದ ಗುಪ್ತವಾಗಿ ಹೊಸ ಮೊಬೈಲ್ ಒಂದನ್ನು ನೀಡಿದ್ದ.
ನಿತ್ಯವೂ ಬಾಲಕಿಯೊಂದಿಗೆ ವಾಟ್ಸ್ಅಪ್ನಲ್ಲಿ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ ಆರೋಪಿ ಅಪ್ರಾಪ್ತೆಯೂ ನಗ್ನವಾಗಿ ವಿಡಿಯೋ ಕರೆ ಮಾಡಿದ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದ ಮತ್ತು ಒಪ್ಪದಿದ್ದಲ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ ಎಂದು ತಿಳಿದು ಬಂದಿದೆ.
ಅಪ್ರಾಪ್ತೆಯ ಪೋಷಕರು ಪ್ರವಾಸಕ್ಕೆಂದು ತೆರಳಿದ್ದ ವೇಳೆ ಆಕೆಯನ್ನು ಅಜ್ಜಿ ಮನೆಯಲ್ಲಿ ಬಿಟ್ಟು ತೆರಳಿದ್ದರು ಈ ವೇಳೆ ಬಾಲಕಿಯ ಅಜ್ಜಿ ಮನೆ ಬಳಿ ತೆರಳಿದ್ದ ಆರೋಪಿಯೂ ಅಪ್ರಾಪ್ತೆಯ ಅಜ್ಜಿಗೆ ನಿದ್ರೆ ಮಾತ್ರೆ ನೀಡಿ ಇಸ್ಲಾಂ ಧರ್ಮಕ್ಕೆ ಮತಾಂತರವಾದಲ್ಲಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೋಷಕರು ಪ್ರವಾಸದಿಂದ ವಾಪಸ್ ಆದ ನಂತರ ಬಾಲಕಿಯ ವರ್ತನೆಯಲ್ಲಿ ಬದಲಾವಣೆಯಾಗಿರುವುದು ಕಂಡು ಬಂದಿದ್ದು ಈ ಬಗ್ಗೆ ವಿಚಾರಿಸಿದಾಗ ಅಪ್ರಾಪ್ತೆ ಘಟನೆ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣವೇ ಎಚ್ಚೆತ್ತ ಪೋಷಕರು ಆರೋಪಿ ಯೂನಸ್ ವಿರುದ್ದ ನಾಗಮಂಗಲ ಪಟ್ಟಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಹಿಂದೆ ಆರೋಪಿ ಯೂನಸ್ ಪಾಷಾ ತನ್ನದೇ ಸಮುದಾಯದ ಬಡ ಯುವತಿಯನ್ನು ಪುಸಲಾಯಿಸಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ ಮತ್ತು ಜೈಲು ಪಾಲಾಗಿದ್ದ. ನಂತರ ಯುವತಿಯನ್ನು ಮದುವೆಯಾಗುವ ಮೂಲಕ ಪ್ರಕರಣವನ್ನ ಖುಲಾಸೆ ಮಾಡಿಕೊಂಡಿದ್ದ. ಎಂದು ತಿಳಿದು ಬಂದಿದೆ.