ಹೆಚ್ಚಿನ ಸಾವಿನ ಸಂಖ್ಯೆಯನ್ನು ಹೊಂದಿರುವ 7 ರಾಷ್ಟ್ರಗಳಲ್ಲಿ ಭಾರತದ ಮಹಾರಾಷ್ಟ್ರವು ಒಂದು; ಇಂದು 1 ಲಕ್ಷ ದಾಟುವ ಸಾಧ್ಯತೆ.!

ಮುಂಬೈ: ಮಹಾರಾಷ್ಟ್ರವು ಭಾನುವಾರ ಒಟ್ಟು 1 ಲಕ್ಷ ಕೋವಿಡ್ ಸಾವುಗಳ ಭೀಕರ ಮೈಲಿಗಲ್ಲು ದಾಟುವ ಸಾಧ್ಯತೆಯಿದೆ. ಸಾಂಕ್ರಾಮಿಕ ಸಮಯದಲ್ಲಿ ಕೇವಲ ಏಳು ದೇಶಗಳು (ಭಾರತ ಸೇರಿದಂತೆ) ಹೆಚ್ಚಿನ ಸಂಖ್ಯೆಯ ಸಾವುಗಳನ್ನು ಹೊಂದಿವೆ. ಈಗ ಮಹಾರಾಷ್ಟ್ರದ ಕೋವಿಡ್ ಸಾವುಗಳ ಸಂಖ್ಯೆ ಫ್ರಾನ್ಸ್‌ಗೆ ಸಮೀಪದಲ್ಲಿದೆ ಎನ್ನಲಾಗಿದೆ. ಇದುವರೆಗೂ ಫ್ರಾನ್ಸ್ ನಲ್ಲಿ 1.09 ಲಕ್ಷ ಸಾವುಗಳನ್ನು ದಾಖಲಿಸಿದೆ.

ಶನಿವಾರ ಮಹಾರಾಷ್ಟ್ರ ರಾಜ್ಯದಲ್ಲಿ ಕಡಿಮೆ ಏಕದಿನ ಪ್ರಕರಣಗಳ ಸಂಖ್ಯೆಯನ್ನು ದಾಖಲಿಸಿದೆ. ಕಳೆದ ಮೂರು ತಿಂಗಳಿನಲ್ಲಿ ಇದು ಅತ್ಯಂತ ಕಡಿಮೆ ಪ್ರಕರಣ ಎನ್ನಲಾಗಿದ್ದು ನೆನ್ನೆ ಒಂದೇ ದಿನ 13,659 ಪ್ರಕರಣಗಳು ದಾಖಲಾಗಿದೆ. 741 ಸಾವುಗಳ ಪೈಕಿ ಶನಿವಾರ ಕೇವಲ 300 ಸಾವುಗಳು ದಾಖಲಾಗಿದ್ದರೆ, ಉಳಿದ 441 ಸಾವುಗಳು ಒಂದು ವಾರದ ಹಿಂದೆ ಸಂಭವಿಸಿವೆ ಎಂದು TOI ವರದಿ ಮಾಡಿದೆ. ಹೀಗೆ ರಾಜ್ಯದಲ್ಲಿ ಶನಿವಾರವರೆಗೆ ಒಟ್ಟು 99,512 ಸಾವುಗಳು ಸಂಭವಿಸಿವೆ.

“ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕರೋನ ಪ್ರಕರಣಗಳು ಕುಸಿತವನ್ನು ವರದಿಯಾಗಿರುವುದರಿಂದ ಸಾವು-ನೋವುಗಳು ಕೂಡ ಮುಂದಿನ ಕೆಲವು ದಿನಗಳಲ್ಲಿ ಕುಸಿತ ಕಾಣಲಿದೆ” ಎಂದು ರಾಜ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೋವಿಡ್ ಪರಿಸ್ಥಿತಿ ವಿಶಿಷ್ಟವಾಗಿದೆ ಎಂದು ರಾಜ್ಯ ಕಾರ್ಯಪಡೆಯ ಸದಸ್ಯ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ. “ರಾಜ್ಯವು ಅತ್ಯುತ್ತಮ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಂಡಿದೆ ಮತ್ತು ಪ್ರತಿಯೊಂದು ಪ್ರಕರಣ ಮತ್ತು ಸಾವುಗಳನ್ನು ಸರಿಯಾಗಿ ದಾಖಲಿಸಿದೆ ಎಂದು ತಿಳಿಸಿದ್ದಾರೆ.”

ಮುಂಬೈನಲ್ಲಿ, ದೈನಂದಿನ ಸಂಖ್ಯೆ (863) ನಾಲ್ಕನೇ ದಿನ 900 ಕ್ಕಿಂತ ಕಡಿಮೆಯಾಗಿದೆ, ಮತ್ತು 29 ಸಾವುಗಳು ದಾಖಲಾಗಿವೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 7.09 ಲಕ್ಷ ಪ್ರಕರಣ ದಾಖಲಾದರೆ ಒಟ್ಟು ಸಾವಿನ ಸಂಖ್ಯೆ 14,951 ಆಗಿದೆ. “ಮುಂಬೈ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ನಮ್ಮ ಕೇಸ್ ಲೋಡ್ ಸುಮಾರು 900 ರಷ್ಟಿದೆ, ಮತ್ತು ಕಳೆದ ಹದಿನೈದು ದಿನಗಳಲ್ಲಿ ಸಾವುಗಳು ತೀವ್ರವಾಗಿ ಕಡಿಮೆಯಾಗಿವೆ ಎಂದು ಬಿಎಂಸಿ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಡಾ.ಮಂಗಲ ಗೋಮರೆ ಹೇಳಿದರು. ಪ್ಯಾರೆಲ್‌ನ ಬಿಎಂಸಿ ನಡೆಸುತ್ತಿರುವ ಕೆಇಎಂ ಆಸ್ಪತ್ರೆಯಲ್ಲಿ 77 ಕ್ರಿಟಿಕಲ್ ಕೋವಿಡ್ ರೋಗಿಗಳಿದ್ದಾರೆ. “ಒಂದು ವಾರದ ಹಿಂದೆಯೇ, ನಮ್ಮ ರೋಗಿಗಳ ಸಂಖ್ಯೆ ಮೂರು ಅಂಕೆಗಳಲ್ಲಿತ್ತು” ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ. ಹೇಮಂತ್ ದೇಶ್ಮುಖ್ ಹೇಳಿದ್ದಾರೆ. ಈ ರೋಗಿಗಳಲ್ಲಿ ಹೆಚ್ಚಿನವರು ಇತರ ಆಸ್ಪತ್ರೆಗಳು ಅಥವಾ ನಗರಗಳಿಂದ ವರ್ಗಾವಣೆಯಾದವರು ಎಂದು ಅವರು ಹೇಳಿದ್ದಾರೆ.

ಎರಡು ವಾರಗಳ ಹಿಂದಿನ ಅವಧಿಗೆ ಹೋಲಿಸಿದರೆ ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ನೊಂದಿಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ರೋಗಿಗಳಲ್ಲಿ ಅನೇಕರಿಗೆ 25 ದಿನಗಳ ಚಿಕಿತ್ಸೆಯ ಅಗತ್ಯವಿರುವುದರಿಂದ, ಹಲವರನ್ನು ಇನ್ನೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...